Published
6 months agoon
By
Akkare Newsಜೂನ್ 27: ಮಂಗಳೂರು ತಾಲೂಕಿನ ರೋಸಾರಿಯೋ ಬಳಿ ವಿದ್ಯುತ್ ತಂತಿ ಬಿದ್ದು ಕರೆಂಟ್ ಶಾಕ್‌ನಿಂದ ಇಬ್ಬರು ಆಟೋ ಚಾಲಕರು ಮೃತಪಟ್ಟ ಘಟನೆ ತಿಳಿದು ಆಘಾತವಾಯಿತು. ಕರಾವಳಿಯಾದ್ಯಂತ ಎಡೆಬಿಡೆದೆ ಮಳೆ ಸುರಿಯುತಿದ್ದು, ಮಳೆಗಾಲದ ಮುನ್ನೆಚರಿಕೆ ಕೈಗೊಳ್ಳಬೇಕಾಗಿರುವುದು ವಿವಿಧ ಇಲಾಖಾಧಿಕಾರಿಗಳ ಕರ್ತವ್ಯವೂ ಕೂಡ. ಮುನ್ನೆಚರಿಕಾ ಕ್ರಮವಾಗಿ ಕೂಡಲೇ ಅಪಾಯಕಾರಿ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ನಡೆಸಬೇಕು ಮತ್ತು ದುರ್ಘಟನೆಯಿಂದ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜಿಲ್ಲಾದ್ಯಂತ ಅನೇಕ ಕಡೆ ಅಪಾಯಕಾರಿಯಾದ ಮರ, ವಿದ್ಯುತ್ ತಂತಿಗಳಿದ್ದು ಅಧಿಕಾರಿಗಳು ಕೂಡಲೇ ಗಮನಹರಿಸಿ ಸಂಭಾವ್ಯ ಅನಾಹುತ ತಪ್ಪಿಸಬೇಕು.
ಕೆಲವೊಂದು ಕಡೆ ತೋಡು ಸೇರಿದಂತೆ ಕಿಂಡಿ ಅಣೆಕಟ್ಟುಗಳಲ್ಲಿ ಹೂಳು ತುಂಬಿ ಅಪಾಯ ಎದುರಾಗುವ ಸಾಧ್ಯತೆಗಳಿದ್ದು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ಮುಂದೆ ಇಂತಹ ದುರ್ಘಟನೆ ಮರುಕಳಿಸದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇನೆ.
-ಪದ್ಮರಾಜ್ ಆರ್. ಪೂಜಾರಿ
ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ