Published
6 months agoon
By
Akkare Newsಪುತ್ತೂರು; ಬನ್ನೂರು ಜೈನರ ಗುರಿಯಲ್ಲಿ ಧರೆ ಕುಸಿದು ಮನೆ ಹಾನಿಗೊಂಡು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದ್ದು ಘಟನಾ ಸ್ಥಳಕ್ಮೆ ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಶೆಟ್ಟಿ ಸಿಝ್ಲರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕರ ಸೂಚನೆಯಮೇರೆಗೆ ಪ್ರಸನ್ನ ಅವರು ಭೇಟಿ ನೀಡಿದ್ದು ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದು ಶಾಸಕರು ಬೆಂಗಳೂರಿಂದ ಆಗಮಿಸಿದ ತಕ್ಷಣ ಇಲ್ಲಿಗೆ ಭೇಟಿ ನೀಡಲಿದ್ದು ಸರಕಾರದಿಂದ ಸಿಗುವ ಪರಿಹಾರವನ್ನು ನೀಡುವಲ್ಲಿ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು. ಇದೇ ಭಾಗದಲ್ಲಿ ಉಸ್ಮಾನ್ ಎಂಬವರ ಬಾವಿ ಕುಸಿತಕ್ಕೊಳಗಾಗಿದ್ದು ಅಲ್ಲಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಕೇಶ್ ರೈ ಕುದ್ಕಾಡಿ, ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಖಿಲ್ ಉಪಸ್ಥಿತರಿದ್ದರು.