ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನಗರದ ಬೀದಿ ದೀಪಗಳ ವಿದ್ಯುತ್ ಕಂಬಗಳ ತಂತಿ ಗಳಿಗೆ ಟ್ರಿಪ್ಪರ್ ಅಳವಡಿಸಲು ಜಿಲ್ಲಾಧಿಕಾರಿ ನಿರ್ದೇಶನ

Published

on

ಅವಘಡಕ್ಕೆ ಕಾರಣವಾಗುವ ವಿದ್ಯುತ್ ಕಂಬಗಳ ತಂತಿಗಳಿಗೆ ಸಂಪರ್ಕ ಸ್ಥಗಿತಗೊಳ್ಳುವ ಟ್ರಿಪ್ಪರ್ ಅಥವಾ ಬ್ರೇಕ‌ರ್ ವ್ಯವಸ್ಥೆ ಅಳವಡಿಸಲು ಮೆಸ್ಕಾಂ ಗೆ ನಿರ್ದೇಶನ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.

 

ಪಾಂಡೇಶ್ವರದ ರೊಸಾರಿಯೋ ಚರ್ಚ್ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಇಬ್ಬರು ಆಟೋ ಚಾಲಕರು ಮೃತಪಟ್ಟ ಘಟನೆ ಸಂಬಂಧ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಘಟನಾ ಸ್ಥಳದಲ್ಲಿ ಎಲ್ಲಾ ವಿದ್ಯುತ್ ತಂತಿಗಳು ಭೂಗತವಾಗಿವೆ.ಬೀದಿ ದೀಪದ ಒಂದು ಲೈನ್ ಮಾತ್ರ ಆಗಿಲ್ಲ. ಮೆಸ್ಕಾಂನ ಎಚ್‌ಟಿ ಲೈನ್‌ಗಳು ತುಂಡಾದಾಗ ಟ್ರಿಪ್ ಆಗಿ ವಿದ್ಯುತ್‌ ಸಂಪರ್ಕ ಕಡಿತ ಆಗುತ್ತದೆ. ರೊಸಾರಿಯೋ ಘಟನೆ ದುರಾದೃಷ್ಟವಶಾತ್ ನಡೆದಿದೆ. ಮುಂದೆ ಇಂಥ ಘಟನೆ ಆಗದಂತೆ ಶೀಘ್ರ ಕ್ರಮ ವಹಿಸಲು ಆದೇಶ ನೀಡಲಾಗಿದೆ. ಎರಡು ದಿನಗಳಲ್ಲಿ ವಿವಿಧ ಇಲಾಖೆಗಳ ತಂಡ ಅಧ್ಯಯನ ನಡೆಸಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ವರದಿ ಮಂಡಿಸಿ ತಡೆಯಲು ಸಾಧ್ಯವಾಗುವ ಅನಾಹುತಗಳ ಬಗ್ಗೆ ಕ್ರಮ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement