ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕ್ರೀಡೆ

T-20 ವಲ್ಡ್ ಕಪ್ ಭಾರತಕ್ಕೆ ಶರಣಾದ ಆಫ್ರಿಕಾನ್ನರು… 17 ವರ್ಷದ ನಂತರ ಚಾಂಪಿಯನ್ ಪಟ್ಟ ಪಡೆದ ಭಾರತ ಕೊಹ್ಲಿಯ ಅಬ್ಬರಕ್ಕೆ ಬಳಲಿ ಬೆಂಡಾದ ಆಫ್ರಿಕಾ ಹೀರೋ ಆದ ಹಾರ್ದಿಕ್ ಪಾಂಡ್ಯಾ

Published

on

ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ ಮೈದಾನದಲ್ಲಿ ಇಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ನಿಂದ ರೋಚಕವಾಗಿ ಸೋಲಿಸುವ ಮೂಲಕ 2ನೇ ಬಾರಿಗೆ ಚಾಂಪಿಯನ್ ಆಗಿದೆ.

ಒಂದು ಹಂತದಲ್ಲಿ ಕೈತಪ್ಪಿದ್ದ ಪಂದ್ಯವನ್ನು ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯಾ ತಮ್ಮ ಬೌಲಿಂಗ್ ಕೈಚಳದಿಂದ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಕೊನೆಯ 6 ಎಸೆತಗಳಲ್ಲಿ 16 ರನ್‌ ಬೇಕಿತ್ತು. ಹಾರ್ದಿಕ್ ಪಾಂಡ್ಯಾ ಎಸೆದ ಮೊದಲ ಎಸೆತವನ್ನು ಮಿಲ್ಲರ್‌ ಸಿಕ್ಸರ್‌ಗೆ ಅಟ್ಟಿದರು. ಆದರೆ ಬೌಂಡರಿ ಗೆರೆಯ ಬಳಿ ಸೂರ್ಯಕುಮಾರ್‌ ಯಾದವ್‌ ಅವರು ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಮಿಲ್ಲರ್‌ 21 ರನ್‌ ಗಳಿಸಿ ಔಟ್‌ ಆದರು.

ನಂತರ ಬಂದ ರಬಾಡಾ ಮೊದಲ ಎಸೆತ ಬೌಂಡರಿಗೆ ಅಟ್ಟಿದರು. ನಂತರ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್‌ ಬಂತು. ನಂತರ 1 ರನ್‌ ಒಂದು ವೈಡ್‌ ಬಂತು. ಐದನೇ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋದ ರಬಡಾ ಕ್ಯಾಚ್‌ ನೀಡಿ ಔಟಾದ ಬೆನ್ನಲ್ಲೇ ಸಂಭ್ರಮಾಚರಣೆ ಆರಂಭವಾಯಿತು. ಕೊನೆಯ ಎಸೆತದಲ್ಲಿ ಒಂದು ರನ್‌ ಬಂತು. ಈ ಮೂಲಕ 7 ರನ್‌ಗಳ ರೋಚಕ ಜಯದೊಂದಿಗೆ, ಭಾರತ ಎರಡನೇ ಬಾರಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.

 

ಸ್ಫೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಚಾಂಪಿಯನ್ ಆಗುವ ಎಲ್ಲ ಅವಕಾಶಗಳಿದ್ದರೂ ಕೂಡ ದಕ್ಷಿಣ ಆಫ್ರಿಕಾ ವಿರೋಚಿತವಾಗಿ ಸೋತಿದೆ. ಆ ಮೂಲಕ ಮತ್ತೆ ‘ಚೋಕರ್ಸ್‌’ ಪಟ್ಟವನ್ನು ಉಳಿಸಿಕೊಂಡಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement