ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಪುತ್ತೂರು: ನಗರಸಭಾ ವ್ಯಾಪ್ತಿಯ ಪಡೀಲ್ ನಲ್ಲಿ ಶಾಸಕರ ಸೂಚನೆ ಮೇರೆಗೆ ಅಪಾಯಕಾರಿ ಮರ ತೆರವು

Published

on

ಪುತ್ತೂರು ಜುಲೈ.02 : ಪುತ್ತೂರು ನಗರಸಭೆ ವ್ಯಾಪ್ತಿಯ ಪಡೀಲ್ ಎಂಬಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸೂಚನೆ ಮೇರೆಗೆ ಅಪಾಯಕಾರಿ ಮರವನ್ನು ಮೆಸ್ಕಾಂ ಅಧಿಕಾರಿಗಳು ತೆರವು ಗೊಳಿಸಿದರು. ಪುತ್ತೂರು ನಗರ ಮೆಸ್ಕಾಂ ಅಧಿಕಾರಿಗಳಾದ ರಾಮಚಂದ್ರ AE ಹಾಗೂ ರಾಜೇಶ್ ಉಪಸ್ಥಿತರಿದ್ದರು.

 

ಗದಗ, ಜು.03: ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಕಲಿಯಲಿ ಎಂದು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು, ಕಾಲಕಾಲೇಶ್ವರ ಸರ್ಕಾರಿ ಶಾಲೆಯ   ಶಿಕ್ಷಕಿ ರೇಣುಕಾ ಎಂಬುವವರು ವಿದ್ಯಾರ್ಥಿಯೋರ್ವನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದು, ಶಿಕ್ಷಕಿ ಹೊಡೆತಕ್ಕೆ ವಿದ್ಯಾರ್ಥಿ ನರಳಾಟ ಅನುಭವಿಸುವಂತಾಗಿದೆ. ಈ ಹಿನ್ನಲೆ ಇಂದು(ಜು.03) ಶಾಲೆಗೆ ಆಗಮಿಸಿದ ಪೋಷಕರು ಶಾಲೆಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇತ್ತ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದಾರೆ. ‘ತಕ್ಷಣ ಶಿಕ್ಷಕಿಯನ್ನ ಅಮಾನತು ಮಾಡಬೇಕು, ಇಲ್ಲವೆಂದರೆ ಬೇರೆ ಶಾಲೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಬಿಇಒ (BEO) ಗಮನಕ್ಕೆ ತಂದರೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಸ್ಥಳಕ್ಕೆ DDPI ಬರುವಂತೆ ಪೋಷಕರ ಪಟ್ಟು ಹಿಡಿದಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement