Published
6 months agoon
By
Akkare Newsದಿನಾಂಕ 3 /7/2024ರಂದು ಸ. ಉ . ಹಿ. ಪ್ರಾ ಶಾಲೆ ಬೆಳ್ಳಿಪ್ಪಾಡಿ ಇಲ್ಲಿ ನೂತನ ಎಸ್.ಡಿ.ಎಂ ಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಮಲ್ಲಿಕಾ ಬಿ. ಎ, ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಡಿಂಬಾಡಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ವೇದಿಕೆಯಲ್ಲಿ ಜಯಪ್ರಕಾಶ್ ಬದಿನಾರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು , ಗ್ರಾಮ ಪಂಚಾಯತ್ ಸದ್ಯರುಗಳಾದ ಉಷಾ ಲಕ್ಷ್ಮಣ ಪೂಜಾರಿ ಮತ್ತು ಮೋಹಿನಿ, ಅಂಗನವಾಡಿ ಕಾರ್ಯಕರ್ತೆ ಮಲ್ಲಿಕಾ ಎಸ್ ಆಳ್ವ, ಭವ್ಯ ವಿ ಶೆಟ್ಟಿ ಮಾಜಿ ಅಧ್ಯಕ್ಷೆ ಎಸ್.ಡಿ.ಎಂ.ಸಿ,ಯಶೋದ ಎನ್ ಎಮ್, ಮುಖ್ಯ ಗುರುಗಳು ಇವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಬಿ.ಎ ಇವರು ನೂತನ ಎಸ್.ಡಿ.ಎಂ.ಸಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಅಧ್ಯಕ್ಷರಾಗಿ ವಾಸುದೇವ ಆಚಾರ್ಯ, ಉಪಾಧ್ಯಕ್ಷರಾಗಿ ಪ್ರೇಮಲತಾ, ಸದಸ್ಯರುಗಳಾಗಿ ಸುಭಾಷಿಣಿ , ಲತಾ, ಕುಸುಮ,ಶಾಂತಿ, ಅನುಸೂಯ, ಪ್ರೀತಿ ಮರಿಯ ಪಿಂಟೋ, ಸುರೇಶ್ ಗೌಡ, ರವಿ, ಅಚ್ಚುತ, ಮೋನಪ್ಪ. ರಂಜಿತಾ, ಪುನೀತಾ, ಭವ್ಯ, ಚೇತನ, ಪದ್ಮಶ್ರೀ, ರಾಜೀವಿ ಸರ್ವಾನುಮತದಿಂದ ಆಯ್ಕೆಯಾದರು.
ಪದನಿಮಿತ್ತ ಸದಸ್ಯರು , ಯಶೋದ ಎನ್ ಎಮ್, ಮುಖ್ಯ ಗುರುಗಳು ಬೆಳ್ಳಿಪ್ಪಾಡಿ ಶಾಲೆ, ಶೀಲಾ ಆರೋಗ್ಯ ಕಾರ್ಯಕರ್ತೆ, ಮಲ್ಲಿಕಾ ಎಸ್ ಆಳ್ವ, ಅಂಗನವಾಡಿ ಕಾರ್ಯಕರ್ತೆ. ನಾಮನಿರ್ದೇಶಿತ ಸದಸ್ಯರು ಉಷಾ ಲಕ್ಷ್ಮಣ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರು, ಸುಮಿತ್ರಾ ಎಸ್, ಶಿಕ್ಷಕ ಪ್ರತಿನಿಧಿ ಕುಮಾರಿ ದೀಪಿಕಾ ಶಾಲಾ ನಾಯಕಿ.
ಎಸ್ ಡಿ ಎಂ ಸಿ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಸಂದರ್ಭೋಚಿತವಾಗಿ ಮಾತನಾಡಿ ಆಯ್ಕೆಯಾದ ನೂತನ ಸದಸ್ಯರಿಗೆ ಶುಭಾ ಹಾರೈಸಿದರು, ಉಪಾಧ್ಯಕ್ಷರು ಮಾತನಾಡಿ ನೂತನ ಸದಸ್ಯರಿಗೆ ಶುಭಹಾರೈಸಿದರು. ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಭವ್ಯ ವಿ ಶೆಟ್ಟಿ ಶಾಲಾಭಿವೃದ್ಧಿಯ ಹಿನ್ನೋಟದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಯಶೋದ ಎನ್ ಎಂ.ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ವಿದ್ಯಾರ್ಥಿಗಳು ಪ್ರಾರ್ಥನೆಗೈದು, ಸಹಶಿಕ್ಷಕಿ ಸುಮಿತ್ರಾ ಎಸ್ ವಂದಿಸಿದರು, ಎಲ್ಲಾ ಶಿಕ್ಷಕರು ಸಹಕರಿಸಿದರು.