Published
11 months agoon
By
Akkare Newsಮುಂಬೈ/ಮಂಗಳೂರು: ಟಿ20 ವಿಶ್ವಕಪ್‌ನೊಂದಿಗೆ ತಾಯ್ನಾಡಿಗೆ ಮರಳಿದ ಟೀಂ ಇಂಡಿಯಾಗೆ ಮುಂಬೈನಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಗಿದೆ. ನಿನ್ನೆ(ಜು.4) ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಂಡಕ್ಕೆ ದೆಹಲಿಯಲ್ಲೂ ಅದ್ದೂರಿ ಸ್ವಾಗತ ನೀಡಲಾಗಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ಬೇಟಿಯಾದ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನಿವಾಸದಲ್ಲಿ ಉಪಹಾರ ಸ್ವೀಕರಿಸಿದ್ದರು. ಚಾಂಪಿಯನ್ಸ್ ಎಂದು ಬರೆಯಲಾದ ಟೀಂ ಇಂಡಿಯಾ ಜರ್ಸಿಯಲ್ಲೇ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಬಿಸಿಸಿಐ ಕಡೆಯಿಂದ ಪ್ರಧಾನಿ ಮೋದಿ ಅವರಿಗೆ ನಮೋ ಹೆಸರಿನ ಜೆರ್ಸಿಯನ್ನು ಬಿಸಿಸಿಐ ಅಧ್ಯಕ್ಷ ಜಯ್ ಶಾ ನೀಡಿ ಗೌರವಿಸಿದರು.
ಇದಾದ ಬಳಿಕ ಮುಂಬೈಗೆ ಆಗಮಿಸಿದ ಟೀಂ ಇಂಡಿಯಾವನ್ನು ಮುಂಬೈ ನಗರಿಯ ಲಕ್ಷಾಂತರ ಜನ ಸ್ವಾಗತಿಸಿದ್ದಾರೆ. ವಾಖೆಂಡೆ ಸ್ಟೇಡಿಯಂನಲ್ಲಿ ಬಿಸಿಸಿಐ ವತಿಯಿಂದ ಆಟಗಾರರಿಗೆ ಸನ್ಮಾನ ಹಾಗೂ ಘೋಷಣೆ ಕೂಗಿ, 125 ಕೋಟಿ ಬಹುಮಾನದ ಮೊತ್ತ ನೀಡಲಾಗಿದೆ. ಸಂಜೆ 7 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಂಜಾನೆಯಿಂದಲೇ ಜನ ಜಮಾವಣೆಗೊಂಡಿದ್ದಾರೆ. ಹೀಗಾಗಿ ಮುಂಬೈ ಕ್ವೀನ್‌ನೆಕ್ಲೆಸ್ ರೋಡ್‌ನಲ್ಲಿ ಜನ ಸಾಗರ ತುಂಬಿಕೊಂಡಿದ್ದು ವಿಶೇಷವಾಗಿತ್ತು. ಇಡೀ ಮುಂಬೈ ನಗರಿಯಲ್ಲಿ ಇಂಡಿಯಾ ಪರ ಘೋಷಣೆಗಳು ಮುಗಿಲು ಮಟ್ಟಿತ್ತು.