Published
6 months agoon
By
Akkare Newsಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿ 2024 2025 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ಉದ್ಘಾಟನಾ ಸಮಾರಂಭವು ಜುಲೈ 3ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರು ಮಾತನಾಡಿ ಇಂದಿನ ಎಳೆಯರು ನಾಡಿನ ನಾಳಿನ ನಾಯಕರು. ಆ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರಿಗೆ ಪ್ರಜಾಪ್ರಭುತ್ವದ ನೈಜ ಅನುಭವ, ಮತದಾನದ ಅವಶ್ಯಕತೆ ಹಾಗೂ ಸಂವಿಧಾನ ಬಗೆಗಿನ ಗೌರವ ಶಾಲಾ ಸಂಸತ್ತಿನ ಚಟುವಟಿಕೆಗಳ ಮೂಲಕ ಮೂಡಿಸಬೇಕಾಗಿದೆ.ಪ್ರಜಾಪ್ರಭುತ್ವದ ಆತ್ಮವೇ ಮತದಾನ, ನಾಯಕತ್ವದ ಜವಾಬ್ದಾರಿ ಕರ್ತವ್ಯದ ಕಾಳಜಿ ಮಕ್ಕಳಲ್ಲಿ ಜಾಗೃತಗೊಳ್ಳಲಿ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಪ್ರಮಾಣವಚನ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.
ಶಿಕ್ಷಕಿಯರಾದ ಶ್ರೀಮತಿ ಜೆನಿಫರ್ ಮೊರಾಸ್ ಸ್ವಾಗತಿಸಿ, ಭಗಿನಿ ರೀಮಾ ಬಿ.ಎಸ್ ರವರು ವಂದಿಸಿದರು. ಶ್ರೀಮತಿ ಹೇಮಲತಾ ಮತ್ತು ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.