ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುತ್ತೂರು: ಅನಧಿಕೃತ ಪಿ.ಜಿ ಮತ್ತು ಹಾಸ್ಟೆಲ್‌ ಉದ್ದಿಮೆಗೆ ಕಡಿವಾಣ ಪರವಾನಿಗೆ ಪಡೆಯಲು 7 ದಿನಗಳ ಕಾಲಾವಕಾಶ

Published

on

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ಸರಕಾರಿ/ಖಾಸಗಿ ಮಹಿಳಾ ಮತ್ತು ಪುರುಷರ ವಸತಿ ನಿಲಯಗಳು ಹಾಗೂ ಪಿ.ಜಿ ಗಳು ನಗರಸಭೆಯಿಂದ ಯಾವುದೇ ಉದ್ದಿಮೆ ಪರವಾನಿಗೆಯನ್ನು ಪಡೆಯದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವುದು ನಗರಸಭೆಯ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಸರಕಾರಿ/ಖಾಸಗಿ ವಸತಿ ನಿಲಯಗಳು ಮತ್ತು ಪಿ.ಜಿ ಗಳು ಮುಂದಿನ 7 ದಿನಗಳ ಒಳಗಾಗಿ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸಿ ನಿಯಮಾನುಸಾರವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆಯತಕ್ಕದ್ದು. ತಪ್ಪಿದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡು ಉದ್ದಿಮೆಯನ್ನು ಸ್ಥಗಿತಗೊಳಸಲಾಗುವುದೆಂದು ನಗರ ಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

 

 

 

ಈಗಾಗಲೇ ನಗರಸಭೆಯಿಂದ ಉದ್ದಿಮೆ ಪರವಾನಿಗೆಯನ್ನು ಪಡೆದ ಸರಕಾರಿ/ ಖಾಸಗಿ ವಸತಿ ನಿಲಯಗಳು ಮತ್ತು ಪಿ.ಜಿಗಳು ಎಲ್ಲಾ ವಿವರಗಳೊಂದೆಗೆ ಮಾಹಿತಿಯನ್ನು ಕಚೇರಿಯ ಆರೋಗ್ಯ ವಿಭಾಗದಲ್ಲಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement