Published
6 months agoon
By
Akkare Newsಮಂಗಳೂರಿನ ಕಾವೂರಿನಲ್ಲಿ ನಿನ್ನೆ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಶಾಸಕ ಭರತ್ ಶೆಟ್ಟಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಎಂದು ಗೊತ್ತಿಲ್ಲ ಎಂದಿದ್ದರು. ಈ ಹಿನ್ನಲೆ ಐವನ್ ಡಿಸೋಜಾ ನೇತೃತ್ವದ ನಿಯೋಗ ಭರತ್ ಶೆಟ್ಟಿ ಅವರನ್ನು ಬಂಧಿಸಲು ಕಮಿಷನರ್ಗೆ ದೂರು ನೀಡಿದೆ.