ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಸುಬ್ರಮಣ್ಯ : ಮೆಸ್ಕಾಂ ಕಛೇರಿಯಿಂದ ಬ್ಯಾಟರಿ ಕದ್ದ ಕಳ್ಳರ ಬಂಧನ

Published

on

 

ಸುಬ್ರಮಣ್ಯ ಮೆಸ್ಕಾಂ ನ ವಿದ್ಯುತ್ ವಿತರಣ ಕೇಂದ್ರದಲ್ಲಿ ಮಾರ್ಚ್ ನಲ್ಲಿ 8 ಬ್ಯಾಟರಿ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್‌ ಎಂಬತನನ್ನು ಬಂಧಿಸಿ ಆತನಿಂದ ಹಣ ಹಾಗೂ ಬ್ಯಾಟರಿ ವಶಪಡಿಸಿಕೊಳ್ಳಲಾಗಿತ್ತು.

 

ಇನ್ನೊಬ್ಬ ಆರೋಪಿಯಾದ ಮುತ್ತುಮಣಿ ಎಂಬಾತನನ್ನು ಮಂಗಳೂರಿನಲ್ಲಿ ಅರೆಸ್ಟ್ ಮಾಡಿ ಆತನಿಂದ ಕೃತ್ಯಕ್ಕೆ ಬಳಕೆಯಾದ KA19AC 7392 ಗೂಡ್ಸ್‌ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಿಟ್ಲ ಹಾಗೂ ಸುಳ್ಯ ವ್ಯಾಪ್ತಿಯಲ್ಲಿ ಕೈ ಚಳಕ ತೋರಿಸಿರುವುದಾಗಿದೆ ಎಂದು ತಿಳಿದು ಬಂದಿದೆ.

 

ಆರೋಪಿ ಪತ್ತೆಯಲ್ಲಿ ಇನ್ಸೆಕ್ಟರ್ ಸತೀಶ್ ಹಾಗೂ ಸುಬ್ರಮಣ್ಯ ಠಾಣಾ ಎಸ್ ಐ ಕಾರ್ತಿಕ್, ಎಸ್ ಐ ಮಹೇಶ ಪಿ ಹಾಗೂ ಅಪರಾಧ ಸಿಬ್ಬಂದಿಯಾದ ಮಹೇಶ್ ಹಾಗೂ ಆಕಾಶ್ ರವರು ಪ್ರಮುಖ ಪಾತ್ರವಹಿಸಿರುತ್ತಾರೆ. ಎ ಎಸ್ ಐ ಕರುಣಾಕರ, ಸಂಧ್ಯಾ, ವಿಠಲ್ ರವರು ಪೂರಕವಾಗಿ ಕಾರ್ಯ ನಿರ್ವಹಿಸಿರುತ್ತಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement