Published
5 months agoon
By
Akkare Newsಶಾಲೆಗಳು ಊರಿಗೆ ದೇಗುಲವಿದ್ದಂತೆ: ಶಾಸಕ ಅಶೋಕ್ ರೈ
ಪುತ್ತೂರು: ಊರಿನ ಶಾಲೆಗಳು ಊರಿನದೇಗುಲ ಇದ್ದಂತೆ ಅವುಗಳಮೇಲೆ ಗ್ರಾಮಸ್ಥರಿಗೆ ಪ್ರೀತಿ ಇರಬೇಕು, ಎಲ್ಲರೂ ಒಟ್ಡಾಗಿ ಶಾಲೆಯ ಬಗ್ಗೆ ಒಲವು ತೋರಸಿದ್ದಲ್ಲಿ ಶಾಲೆಗಳು ಬೆಳಗುತ್ತದೆ ಎಂದುಶಾಸಕ ಅಶೋಕ್ ರೈ ಹೇಳಿದರು.
ಅವರು ಪಾಪೆಮಜಲು ಸರಕಾರಿ ಹಿ ಪ್ರಾ ಶಾಲೆಯಲ್ಲು ಸಿಎಸ್ ಆರ್ ಅನುದಾನದಿಂದ ನಿರ್ಮಾಣವಾದ ನೂತನ ಶಾಲಾ ಸಭಾಂಗಣವನ್ನು ಉದ್ಘಾಟಿಸಿಮಾತನಾಡಿದರುನ ಮಕ್ಕಳ ಸಂಖ್ಯೇ ತೀರಾ ಕಡಿಮೆ ಇದೆ ಇದು ಅಪಾಯಕಾರಿ. ಶಾಲೆ ಉಳಿಯಬೇಕಾದರೆ ಮಕ್ಕಳು ಬೇಕಾಗುತ್ತದೆ. ಮಕ್ಕಳು ಕಡಿಮೆ ಇರುವ ಶಾಲೆಗಳನ್ನು ಹೆಚ್ಚುಮಕ್ಕಳಿರುವ ಶಾಲೆಗೆ ಮರ್ಜಿಮಾಡಿ ಅದನ್ನೇ ಕೆಪಿಎಸ್ ಶಾಲೆಯನ್ನಾಗಿ ಮಾಡಲಾಗುವುದು ಎಂದರು.
ಪ್ರಾಥಮಿಕ ಶಾಲೆಗಳಲ್ಲಿಆಂಗ್ಲ ಮಾಧ್ಯಮ ತರಗತಿಯನ್ನು ಆರಂಭಿಸಲಾಗಿದೆ. ಗ್ರಾಮೀಣ ಮಕ್ಕಳೂ ಆಂಗ್ಲಮಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಈ ವ್ಯವಸ್ಥೆ ಮಾಡಿದೆ. ಸರಕಾರಿಶಾಲೆಗಳೂಮುಂದೆ ಗುಣಮಟ್ಟದ ಶಿಕ್ಷಣ ನೀಡುವತ್ತ ಅಙಿವೃದ್ದಿಯಾಗಲಿದೆ ಎಂದು ಹೇಳಿದರು.
ಎಂಆರ್ ಪಿಎಲ್ ನಿಂದ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಲಾಗುತ್ತಿದೆ.ಸಿಎಸ್ಆರ್ ಫಂಡ್ ಮೂಲಕ ಹಲವಾರು ಶಾಲೆಗಳಲ್ಲಿ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ಎಂಆರ್ ಪಿಎಲ್ ಸಂಸ್ಥೆಗೆ ಅಂದುಜನರಿಂದ ವಿರೋಧ ಇತ್ತು ಆದರೆ ಈಗ ಅವರ ಸಮಾಜ ಸೇವೆಯಿಂದ ಜನ ಸಂತೃಪ್ತರಾಗಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಎಂಆರ್ ಪಿ ಎಲ್ ಸಂಸ್ಥೆಯ ದಯಾನಂದ ಪ್ರಭು, ನಿವೃತ್ತ ಮುಖ್ಯಗುರು ಸುಬ್ರಹ್ಮಣ್ಯ ತೆರೆಸಾ, ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ, ಮಾಜಿ ಸೈನಿಕ ಅಮಣ್ಣ ರೈ ಪಾಪೆಮಜಲು, ಪಾಪೆಮಜಲು ಪ್ರೌಢ ಶಾಲೆಯ ಮುಖ್ಯ ಗುರು ಮೋನಪ್ಪ ಬಿ ಪೂಜಾರಿ , ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್, ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್, ಗ್ರಾಪಂಸದಸ್ಯರಾದ ನಾರಾಯಣ ನಾಯ್ಕ, ಪುಷ್ಪಲತಾ,ಗೀತಾ ದಯಾನಂದ, ದಯಾನಂದ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಪ್ರಮುಖರು, ಅಕ್ಷರ ದಾಸೋಹಸಿಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮೇಬಲ್ ಡಿಸೋಜಾ ಸ್ವಾಗತಿಸಿದರು.ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.