Published
5 months agoon
By
Akkare Newsಪುತ್ತೂರು:ಪುತ್ತೂರು ತಾಲೂಕಿನ ಕೊಳ್ಳಿಗೆ ಗ್ರಾಮದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 08:00 ರಿಂದ 08:15 ಗಂಟೆಯ ಸಮಯದಲ್ಲಿ ಪುತ್ತೂರಿನ ಪ್ರಯಾಣಿಸಲು ಬಸ್‌ನ ಕೊರತೆ ಇದೆ. ಬೆಳಿಗ್ಗೆ 07:45 ರ ಸಮಯದಲ್ಲಿ ಸುಳ್ಯ ತಾಲೂಕಿನ ಪೈಲಾರ್‌ನಿಂದ ಕೊಳ್ತಿಗೆಯ ಮೂಲಕ ಹಾದು ಹೋಗುವ ಬಸ್ಸು ತಲುಪುವಾಗಲೇ ಬಹುತೇಕ ಭರ್ತಿಯಾಗುತ್ತಿದ್ದು, ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಅವಕಾಶ ಸಿಗುವುದಿಲ್ಲ.
ಬಸ್ಸು ತುಂಬಿದ ನಂತರ ಮುಂದಿನ ನಿಲ್ದಾಣಗಳಲಿ ಬಸ್ಸು ನಿಲ್ಲಿಸದೇ ಮುಂದುವರಿಯುವುದರಿಂದ ಶಾಲೆ, ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ವಾಹನದ ಕೊರತೆಯಿಂದ ಕ್ಲಪ್ತ ಸಮಯಕ್ಕೆ ಕಾಲೇಜು ತಲುಪಲು ವಿಫಲವಾಗಿ ಅವರಿಗೆ ತೊಂದರೆಯಾಗುತ್ತಿದೆ.
ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 08:00 ರಿಂದ 08:15 ರ ಸಮಯದಲ್ಲಿ ಬಸ್ಸಿನ ವ್ಯವಸ್ಥೆ ಮಾಡಿಕೊಡಬೇಕೆಂದುಶಾಸಕರಿಗೆ ನೀಡಿದಮನವಿಯಲ್ಲಿ ತಿಳಿಸಲಾಗಿದೆ.
ಎನ್.ಎಸ್.ಯು.ಐ, ಪುತ್ತೂರು ಪ್ರಧಾನ ಕಾರ್ಯದರ್ಶಿ ರೂಪ್ ರಾಜ್‌ಮೊಗಪ್ಪೆ,ಕೆಪಿಸಿಸಿ ಸಂಯೋಜಕರಾದ ಪ್ರದೀಪ್ ಕುಮಾರ್ ಪಾಂಬಾರ್ , ಎನ್ ಎಸ್ ಯು ಐ ಸಾಮಾಜಿಕ ಜಾಲತಾಣದ ನವೀನ್ ಬನ್ನೂರು ಉಪಸ್ಥಿತರಿದ್ದರು.