Published
5 months agoon
By
Akkare Newsಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕರ್ತರು ವಿಶೇಷ ಕಾರ್ಯಕ್ರಮ ಇಂದು ಬೆಂಗಳೂರು ಕೆಪಿಸಿಸಿ ಭಾರತ್ ಜೋಡೋ ಆಡಿಟೋರಿಯಂ ನಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷರಾದ ಸಚಿನ್ ರಾಜ್ ಶೆಟ್ಟಿ ಅವರು ಮುಖ್ಯಮಂತ್ರಿ ಗಳನ್ನು ಬೇಟಿ ಮಾಡಿ ಪೆರುವಾಜೆ ಗ್ರಾಮದಲ್ಲಿ ಅಭಿವೃದ್ಧಿ ಕಾಣದ ರಸ್ತೆಗಳಾದ ದುರ್ಗಾ ನಗರ – ಕೊಲ್ಯ – ಪೆರುವಾಜೆ, ಮುರ್ಕೆತ್ತಿ ಪೆಲತ್ತಡ್ಕ, ದೇವರಗುಂಡಿ – ವೈಪಾಲು, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆಗಳಿಗೆ ಅನುದಾನ ನೀಡುವಂತೆ ಹಾಗೂ ಪೆರುವಾಜೆ ಅಂಬೇಡ್ಕರ್ ಭವನಕ್ಕೆ ಅನುದಾನ ನೀಡುವಂತೆ ಅವರಿಗೆ ಮನವಿ ಸಲ್ಲಿಸಿದಾಗ ಪರಿಶೀಲನೆ ಮಾಡುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.