ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಪುಡಾ ಅಧ್ಯಕ್ಷರ ರಾಜೀನಾಮೆ : ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ: ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು ಪುಡ ಅಧ್ಯಕ್ಷರಾದ ಭಾಸ್ಕರ್ ಅವರು ನಿನ್ನೆ ರಾಜೀನಾಮೆ ನೀಡಿದ ವಿಚಾರ ಮಾಧ್ಯಮದ ಮೂಲಕ ತಿಳಿದುಬಂದಿರುತ್ತದೆ. ಒಬ್ಬ ವಕೀಲರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಕೆಲಸವನ್ನು ಮಾಡಿದ ಭಾಸ್ಕರ್ ಕೋಡಿಂಬಳ ಅವರಿಗೆ ನೋವಾಗುವ ರೀತಿಯಲ್ಲಿ ನಾನು ಮಾತನಾಡಿಲ್ಲ ಮಾತನಾಡುವ ವ್ಯಕ್ತಿಯು ನಾನಲ್ಲ ನಾನು ಆಡಿದ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ದನಾಗಿದ್ದೇನೆ .

ಈ ಮೊದಲು ನನ್ನ ಚುನಾವಣೆಯಲ್ಲಿ ಹಗಲಿರುಳು ದುಡಿದು ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೂಡ ಪಕ್ಷಕ್ಕೆ ಕೆಲಸವನ್ನು ಮಾಡಿದಂತ ಒಬ್ಬ ಪ್ರಾಮಾಣಿಕ ರಾಜಕಾರಣಿ. ಜನಸಾಮಾನ್ಯರಿಗೆ ತೊಂದರೆ ಆಗುವ ಪುಢಾದ ಕೆಲವು ವಿಷಯದ ಬಗ್ಗೆ ನಾನು ಮಾತನಾಡಿಸುತ್ತೇನೆ.

 

ಆದರೆ ಯಾರಿಗೂ ನೋವಾಗುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು .ಅಧ್ಯಕ್ಷರ ರಾಜೀನಾಮೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ವಿಷಯಗಳಿಗೆ ಕಾರ್ಯಕರ್ತರು ಯಾರು ಕಿವಿ ಕೊಡಬಾರದೆಂದು ಅಕ್ಕರೆ ನ್ಯೂಸ್ ಗೆ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿರುತ್ತಾರೆ

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement