Published
5 months agoon
By
Akkare Newsಬೆಳ್ತಂಗಡಿ : ಕೇಂದ್ರ ಸರಕಾರವು ಕಡಿಮೆ ದರದಲ್ಲಿ ನೀಡುತ್ತಿರುವ ಭಾರತ್ ಬ್ರ್ಯಾಂಡ್‌ನ ಅಕ್ಕಿಯನ್ನು ಚಾರ್ಮಾಡಿ-ಉಜಿರೆ ರಸ್ತೆಯಲ್ಲಿರುವ ದಿನಸಿ ಅಂಗಡಿ ಬಳಿ ಮಾರಾಟ ಮಾಡುತ್ತಿದ್ದ ಲಾರಿಯನ್ನು ಸ್ಥಳೀಯರು ಸೇರಿ ತಡೆ ಹಿಡಿದ ಘಟನೆ ನಡೆದಿದೆ.
(ಸೋಮವಾರ) ಪಿ.ಕೆ. ಮಳಗಿ ಆಗ್ರೊಟೆಕ್ ಎಂಬ ಫಲಕ ಹೊಂದಿ ರುವ ಹಾವೇರಿ ಕಡೆಯಿಂದ ಬಂದ ಕೆ.ಎ.17 ಸಿ. 6204 ನೋಂದಣಿ ಸಂಖ್ಯೆ ಹೊಂದಿರುವ ಲಾರಿಯಲ್ಲಿ 10 ಕೆ.ಜಿ.ಯ 1 ಸಾವಿರ ಮೂಟೆಯನ್ನೊಳಗೊಂಡ ಅಕ್ಕಿ ಲಾರಿಯಲ್ಲಿತ್ತು. ಇದನ್ನು ಕೆ.ಜಿ.ಗೆ 29 ರೂ.ಗಳಂತೆ ಮಾರಾಟ ಮಾಡಲಾಗುತ್ತಿತ್ತು.
ಮಾರಾಟಕ್ಕೆ ಪಡೆದಿರುವ ಕುರಿತು ಇನ್ವೆಸ್ (ಸರಕು ಪಟ್ಟಿ) ಬಿಲ್ ಇಲ್ಲದ್ದರಿಂದ ಅನುಮಾನಗೊಂಡು ಸ್ಥಳೀಯರು ತಹಶೀಲ್ದಾರ್ ಅವರಿಗೆ ದೂರು ನೀಡಿದರು. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟದ ಪರವಾನಿಗೆ ಹೊಂದಿದ್ದು, ಸರಕು ಸಾಗಾಟಕ್ಕೆ ಸಂಬಂಧಿಸಿ ಅಕ್ಕಿಯ ಬಗ್ಗೆ ವಿವರದ ಸರಕು ಸಾಗಾಟ ಬಿಲ್ ಇಲ್ಲದಿದ್ದುದ ರಿಂದ ಲಾರಿಯನ್ನು ವಶಕ್ಕೆ ಪಡೆದು ಪೊಲೀಸರ ವಶಕ್ಕೆ ನೀಡಲಾಗಿದೆ.