Published
5 months agoon
By
Akkare Newsಮಂಗಳೂರು: ನಗರದ ಕಾವೂರು ಠಾಣಾ ವ್ಯಾಪ್ತಿಯ ‘ದಿಯಾ ಸಿಸ್ಟಮ್ಸ್’ ಸಾಫ್ಟ್ವೇರ್ ಕಂಪನಿಯ ಚಾಲಕರ ನಡುವೆ ಬುಧವಾರ ರಾತ್ರಿ ಜಗಳ ನಡೆದಿದ್ದು, ಒಬ್ಬ ಚಾಲಕನಿಗೆ ನಾಲ್ವರ ಗುಂಪು ಗಂಭೀರವಾಗಿ ಹಲ್ಲೆ ನಡೆಸಿದೆ.
ಸಂದೀಪ್ ಹಲ್ಲೆಗೊಳಗಾದ ಚಾಲಕ. ಅದೇ ಕಂಪನಿಯ ಇನ್ನೊಬ್ಬ ಕಾರು ಚಾಲಕ ತೇಜಸ್ ಶೆಟ್ಟಿ, ಆತನ ಸೋದರ ಭವಿತ್ ಶೆಟ್ಟಿ, ಗೆಳೆಯರಾದ ಪ್ರೀತಮ್ ಹಾಗೂ ಪುನೀತ್ ದೇವಾಡಿಗ ಹಲ್ಲೆ ನಡೆಸಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳಕ್ಕೆ ಕಾರಣಗಳೇನು ಎಂಬುದು ಇನ್ನೂ ತಿಳಿದಿಲ್ಲ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣವು ಕಾವೂರು ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.