ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಬಾಲವನ ಅಂಗನವಾಡಿ ವಠಾರದಲ್ಲಿ ಹಾವಿನ ಉಪಟಳ -ಪೋಷಕರಿಗೆ ಆತಂಕ

Published

on

ಪುತ್ತೂರು: ವಠಾರದಲ್ಲಿ ತುಂಬಿದ ಪೊದೆಗಳಿಂದ ಜಾರಿ ಹೊರ ಬರುತ್ತಿರುವ ಹಾವುಗಳು, ಧರೆಯ ಮಣ್ಣು ಕರಗಿ ವಠಾರದಲ್ಲಿ ಹರಡಿದ ಕೆಸರು ಮಣ್ಣು, ಕಾಲಿಟ್ಟರೆ ಜಾರುವ ಇಂಟರ್ ಲಾಕ್, ಅಪಾಯ ಮತ್ತು ಭಯದ ಜೊತೆ ನಡೆಯುತ್ತಿದೆ ಪುತ್ತೂರು ಪರ್ಲಡ್ಕ ಡಾ.ಶಿವರಾಮ ಕಾರಂತರ ಬಾಲವನದಲ್ಲಿರುವ ಅಂಗನವಾಡಿ ಕೇಂದ್ರ. ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವ ಪೋಷಕರು ಮಾತ್ರ ಆತಂಕದಲ್ಲಿದ್ದಾರೆ.

 

ಈ ಅಂಗನವಾಡಿ ವಠಾರದ ಸುತ್ತ ಕಾಡುಗಳು ತುಂಬಿದೆ. ಶೀಟ್ ಹಾಕಿದ ಮಾಡಿಗೆ ದಂಬೆ ಇಲ್ಲದ ಕಾರಣ ನೀರು ಬರೆಗೆ ಬಿದ್ದು ಮಣ್ಣು ಕರಗಿ ಅಂಗಳಕ್ಕೆ ಹಾಕಿದ ಇಂಟರ್ ಲಾಕ್ ಮೇಲೆ ಹರಡಿ ಬಿದ್ದಿದೆ.

ಮಕ್ಕಳು ಸೇರಿದಂತೆ ಯಾರೆಂದರು ನಡೆಯುವಾಗ ಜಾರಿ ಬೀಳುವ ಸ್ಥಿತಿ ಇಲ್ಲಿನದ್ದು.ಇಷ್ಟು ಮಾತ್ರ ಅಲ್ಲ ತುಂಬಿದ ಕಾಡು ಪೊದೆಗಳಿಂದ ಹಾವುಗಳು ಹೊರ ಬರುತ್ತಿದ್ದು ಮಕ್ಕಳಿಗೆ ಆಗುವ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ. ಶಾಸಕರು,ಸ್ಥಳೀಯ ನಗರಸಭೆ ಸದಸ್ಯರು,ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ಬಪ್ಪಳಿಗೆ ಅಬ್ದುಲ್ ಅಝೀಜ್ ಮನವಿ.

 

ಇಂದು ಇದೇ ಜಾಗದಲ್ಲಿ ವಿಷಪೂರಿತ ಹಾವು ಪ್ರತ್ಯಕ್ಷವಾಗಿದ್ದು ಮಕ್ಕಳ ಹಿತದೃಷ್ಠಿಯಿಂದ ವಿಲಂಭಿಸದೆ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ ಎಂದು ಅಝೀಜ್ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿದ್ದಾರೆ.

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement