Published
5 months agoon
By
Akkare Newsಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ “ಆಟಿಡೊಂಜಿ ಕೂಟ” ದಿನಾಂಕ 11 ಆಗಸ್ಟ್ 2024 ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಗಾಣದಪಡ್ಪು ಬಿಸಿ ರೋಡ್ ಇಲ್ಲಿ ಆಯೋಜಿಸಲಾಗಿದ್ದು, ಈ ಆಟಿಡೊಂಜಿ ಕೂಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಬೆಳಗ್ಗೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಗಾಣದಪಡ್ಪು ಇಲ್ಲಿ ನಾರಾಯಣ ಗುರುಗಳಿಗೆ ಪೂಜೆಸಲ್ಲಿಸಿ ಬಿಡುಗಡೆಗೊಳಿಸಲಾಯಿತು
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ತಿಲಕ್ ಶಾಂತಿ, ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಕಾರ್ಯದರ್ಶಿ ಚೇತನ್ ಮುಂಡಾಜೆ ಆಟಿಡೊಂಜಿ ಕೂಟ ಸಂಘಟನೆಯ ಸಂಚಾಲಕ ನವೀನ್ ಪೂಜಾರಿ ಲೊರೆಟ್ಟೊ, ಸಹಸಂಚಾಲಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಉಪಾಧ್ಯಕ್ಷ ನಾರಾಯಣ ಪೂಜಾರಿ ಪಲ್ಲಿಕಂಡ, ಯುವವಾಹಿನಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ರಾಜೇಶ್ ಸುವರ್ಣ, ಹರೀಶ್ ಕೋಟ್ಯಾನ್ ಕುದನೆ, ಸಂಘಟನಾ ಕಾರ್ಯದರ್ಶಿ ಉದಯ ಪೂಜಾರಿ ಮೆನಾಡು, ವಿದ್ಯಾನಿಧಿ ನಿರ್ದೇಶಕ ವಿಕ್ರಮ್ ಶಾಂತಿ ಕೆರೆಕೋಡಿ ಗುತ್ತು, ವಿದ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕಂಜತ್ತೂರು ಉಪಸ್ಥಿತರಿದ್ದರು.