Published
5 months agoon
By
Akkare Newsಪುತ್ತೂರು: ಇಂದು ಶಾಸಕರ ಕಚೇರಿಗೆ ಬಂದವರ ಬಾಯಿ ಸಿಹಿಯಾಗಿದೆ ಇದಕ್ಕೆ ಕಾರಣ ಶಾಸಕರು ತನ್ನ ಕಚೇರಿಗೆ ಬಂದ ಎಲ್ಲರಿಗೂ ಸಿಹಿ ಚಿಕ್ಕಿ ( ಕಟ್ಲೀಸ್) ನೀಡಿದ್ದಾರೆ.
ಬೆಳಿಗ್ಗೆಯಿಂದಲೇ ಶಾಸಕರನ್ನು ಕಾಣಲು ಕಚೇರಿಗೆ ಬಂದು ಕಾಯುತ್ತಿದ್ದ ಸಾರ್ವಜನಿಕರಿಗೆ ಸಿಹಿ ತರಿಸಿದ ಶಾಸಕರು ಅದನ್ನು ಎಲ್ಲರಿಗೂ ಹಂಚಿದರು. ಇನ್ನು ಮುಂದೆ ಪ್ರತೀ ಸೋಮವಾರ ಕಚೇರಿಗೆ ಬಂದವರೆಲ್ಲರಿಗೂ ಸಿಹಿ ಕಟ್ಲೀಸ್ ದೊರೆಯಲಿದೆ. ಕಚೇರಿಗೆ ಬಂದವರನ್ನು ಏನೂ ಕೊಡದೆ ಕಳುಹಿಸುವುದು ಧರ್ಮವಲ್ಲ ಎಂಬ ಮನೋಭಾವ ಶಾಸಕರದ್ದು.
ಕೊಡುವುದರಲ್ಲಿ ಅತ್ಯಂತ ಸಂತೃಪ್ತಿ ಪಡುವ ಶಾಸಕರ ಈ ಮನಸ್ಸಿಗೆ ಜನ ಫುಲ್ ಖಷಿಯಾದರು.
ಯಾಕೆ ಬಂದವರ ಬಾಯಿಯನ್ನು ಸಿಹಿ ಮಾಡುತ್ತಿದ್ದೀರಿ ಎಂದು ಶಾಸಕರನ್ನು ಕೇಳಿದರೆ ಪ್ರತೀ ಸೋಮವಾರ ನನ್ನ ಕಚೇರಿಯಲ್ಲಿ ಜನ ಹೆಚ್ಚು ಸೇರುತ್ತಾರೆ. ಕೆಲವೊಮ್ಮೆ ಗಂಟೆಗಳ ಕಾಲ ಕಾಯುತ್ತಾರೆ. ನನ್ನ ಕಾಣಲು ಬಂದವರ ಬಾಯಿಯನ್ನಾದರೂ ಸಿಹಿ ಮಾಡದಿದ್ದರೆ ಅದು ತಪ್ಪಾಗ್ತದೆ ಎಂಬ ಭಾವನೆಯಿಂದ ಚಿಕ್ಕಿ ಕೊಟ್ಟಿದ್ದೀನಿಮುಂದೆ ಪ್ರತೀ ಸೋಮವಾರ ಬಂದವರಿಗೆಲ್ಲ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.