Published
5 months agoon
By
Akkare Newsಮುಂಡೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಲ್ಲಗುಡ್ಡೆಯಲ್ಲಿ ಸ್ಥಳೀಯ ಕೋಳಿ ಫಾರ್ಮಿನಿಂದ ವಾಸನೆ ಮತ್ತು ನೊಣಗಳಿಂದ ತೊಂದರೆ ಅನುಭವಿಸಿ ಗ್ರಾಮ ಪಂಚಾಯಿತಿಗಳಿಗೆ ಮನವಿಯನ್ನು ಕೊಟ್ಟರು ಯಾವುದೇ ಪ್ರಯೋಜನವಾಗಲಿಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮುಖಾಂತರ ತಿಳಿಸಿದರು ಯಾವುದೇ ರೀತಿಯ ಸ್ಪಂದನೆ ಸಿಗದಿರುವುದು ಬೇಸರ ತಂದಿದೆ ಕೋಳಿ ಫಾರ್ಮಿನ ಲೈಸೆನ್ಸ್ ನವೀಕರಣ ಗೊಲ್ಲದಿದ್ದರೂ ಏಕಾಏಕಿ ಜನರಿಗೆ ತೊಂದರೆ ನೀಡುವ ಕೋಳಿ ಫಾರ್ಮನ್ನು ಕೂಡಲೇ ಬಂದ್ ಮಾಡಬೇಕು ಕೋಳಿ ಫಾರ್ಮಿನ ಸುತ್ತಮುತ್ತ ಇಪ್ಪತ್ತಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿ ಕೂಡ ಊಟ ಮಾಡದ ಪರಿಸ್ಥಿತಿ
ಬಂದಿದೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಕೋಳಿ ಫಾರ್ಮ್ ಅನ್ನು ಕೂಡಲೇ ಬಂದ್ ಮಾಡದಿದ್ದರೆ 20 ಮನೆಯವರು ಮತ್ತು ಸ್ಥಳೀಯ ಪಂಚಾಯಿ ಸದಸ್ಯರು ಜೊತೆಗೂಡಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ ತಾವು ಶಾಸಕರಾಗಿದ್ದೀರಿ ನಿಮ್ಮ ಬಳಿ ಕಳೆದ ವರ್ಷ ನಾವು ಬಂದು ತಿಳಿಸಿದೆವು ಕೋಳಿ ಫಾರ್ಮ್ ನಡೆಸುವವರು ಶ್ರೀಮಂತರದ ಕಾರಣ ಅವರ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುವುದಿಲ್ಲ ಆದ್ದರಿಂದ ಶಾಸಕರಾದ ನೀವು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸೂಚನೆಯನ್ನು ಕೊಟ್ಟು ಕೋಳಿಯನ್ನು ತೆರವುಗೊಳಿಸಿ, ನಮ್ಮನ್ನ ಬದುಕಲು ಬಿಡಿ.