Published
5 months agoon
By
Akkare Newsಜುಲೈ 28: ಬೆಂಗಳೂರು ಬಂಟರ ಸಂಘದ ಚುನಾವಣೆಗೆ ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ದಿನಾಂಕ 28ರಂದು ನಡೆಯಿತು ಚುನಾವಣೆಯಲ್ಲಿ ಮಹಿಳಾ ಉಪಾಧ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ ಬೆಂಗಳೂರಿನ ಸಮಾಜ ಸೇವಕಿ ಉದ್ಯಮಿ ಮತ್ತು ಬಂಟರ ಸಂಘದ ಹಲವು ಹುದ್ದೆಯನ್ನು ನಿಭಾಯಿಸಿದ ಮತ್ತು ಸಮಾಜ ಸೇವೆಯ ಮುಖಾಂತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ ಕಾಂತಿ ಶೆಟ್ಟಿ ನವರು ಮಹಿಳಾ ಉಪಾಧ್ಯಕ್ಷರಾಗಿ ಚುನಾವಣೆಯ ಮೂಲಕ ಆಯ್ಕೆಯಾಗಿರುತ್ತಾರೆ.
ಇವರು ಮೂಲಕ ಕಾರ್ಕಳದ ಶಿರ್ವ ನಡಿಬೆಟ್ಟು ಮನೆತನಕ್ಕೆ ಸೇರಿದವರು.ಕಳೆದ 25 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಉದ್ಯಮಯನ್ನು ಮಾಡುತ್ತಾ ಸಮಾಜ ಸೇವೆಯನ್ನ ಗುರುತಿಸಿ ಬೆಂಗಳೂರು ರತ್ನ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ.ನಮ್ಮ ಕುಟೀರ ಎಂಬ ಸಂಸ್ಥೆಯ ಮುಖಾಂತರ ಸಮಾಜಮುಖಿ ಕೆಲಸವನ್ನು ಮಾಡಿ ಸಮಾಜದಲ್ಲಿ ಉತ್ತಮ ಸಂಘಟಕಿ ಎನ್ನುವ ಬಿರುದನ್ನು ಪಡೆದಿರುತ್ತಾರೆ.