Published
5 months agoon
By
Akkare Newsಪುತ್ತೂರು. ಗೋವು ಕಳ್ಳರ ವಿಪರೀತ ಉಪಚಟದಿಂದ ಗೋವು ಕದ್ದುಕೊಂಡು ಹೋಗುವ ರಭಸದಲ್ಲಿ ಒಂದು ದನ ತಪ್ಪಿಸಿಕೊಂಡು ಪುತ್ತೂರು ನಗರ ಗಣೇಶ್ ಫ್ಯಾಕ್ಟರಿಯ ಬಲಿ ಪತ್ತೆಯಾಗಿದೆ ಇದನ್ನು ನೋಡಿದ ಚಂದ್ರ ಬದಿನಾರು ಅವರು ಪಶು ವೈದ್ಯಾಧಿಕಾರಿ ಗೆ ತಿಳಿಸಿ, ಅದಕ್ಕೆ ಚಿಕಿತ್ಸೆಯನ್ನು ನೀಡಿ ದನವನ್ನು ರಕ್ಷಿಸಿದ್ದಾರೆ. ರಾತ್ರಿ ದನ ಕಳ್ಳರು ಕದ್ದ ದನವನ್ನು ಕೇರಳಕ್ಕೆ ಸಾಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ರಾತ್ರಿ ಗತ್ತು ತಿರುಗುವ ಪೊಲೀಸ್ ಅಧಿಕಾರಿಗಳು ವಾಹನವನ್ನು ಪರಿಶೀಲಿಸಿ, ಗೋವನ್ನ ರಕ್ಷಿಸಬೇಕು ಎನ್ನುವ ಕೂಗು ತಾಲೂಕಿನಾದ್ಯಂತ ಕೇಳಿ ಬರುತ್ತಿದೆ. ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ಕೆಲವು ಸಂಘ-ಸಂಸ್ಥೆಗಳು ಕೈಜೋಡಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.