Published
5 months agoon
By
Akkare Newsಬಂಟ್ವಾಳ : ನಮ್ಮ ಎಲ್ಲಾ ಹೋರಾಟಗಳು ನಮ್ಮಲ್ಲಿರುವ ದೌರ್ಬಲ್ಯ ಗಳ ವಿರುದ್ಧ ಮೀಸಲಿಡಬೇಕು. ಶಿಕ್ಷಣದಿಂದ ಸರ್ವ ಸಂಕಷ್ಟಗಳನ್ನು ದೂರ ಮಾಡಬೌದು, ಶಿಕ್ಷಣವನ್ನು ಪ್ರೀತಿಸಿದ್ದಲ್ಲಿ ಅದು ನಮ್ಮನ್ನು ಉನ್ನತ ಸ್ಥಾನದಲ್ಲಿ ಇಡಲು ಸಾಧ್ಯ.
ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಹಾಗೂ ಸರಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸಿ ಕೊಟ್ಟಂತ ಪೂಜ್ಯ ವೀರೇಂದ್ರ ಹೆಗ್ಡೆ ಯವರ ದೂರ ದೃಷ್ಟಿಯ ಯೋಜನೆ ಅಭಿನಂದದಾಯಕವಾಗಿದೆ. ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ . ಅಭಿಪ್ರಾಯ ಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ. ) ಬಂಟ್ವಾಳ ವತಿಯಿಂದ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌದಿಯಲ್ಲಿ ಜರಗಿದ “ಸುಜ್ಞಾನ ನಿಧಿ” ಹಾಗೂ ಜ್ಞಾನದೀಪ ಶಿಕ್ಷಕರ ಆದೇಶ ಪತ್ರ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೇವಾಂಜಲಿ ಟೆಸ್ಟ್ ಪರಂಗಿಪೇಟೆಯ ಅಧ್ಯಕ್ಷರಾದ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಸರಕಾರಗಳು ಮಾಡದಂತ ಕಾರ್ಯವನ್ನು ಮಾನ್ಯ ವೀರೇಂದ್ರ ಹೆಗ್ಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿದ್ದು, ಯೋಜನೆಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಕ್ಕೆ ಬಲಿಯಾಗದೆ, ಯೋಜನೆ ಮೂಲಕ ಸಿಗುವ ಸೌಲಭ್ಯಗಳನ್ನು ಪಡೆದು ಪೂಜ್ಯ ಖಾವಂದರ ದೂರದೃಷ್ಟಿಯ ಯೋಜನೆಗಳ ಸಹಕಾರ ಗೊಳಿಸುವಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಬಂಟ್ವಾಳ ತಾಲೂಕ್ ಯೋಜನಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿ ಪ್ರಶಸ್ತ ಸಾಲಿನಲ್ಲಿ 310 ವಿದ್ಯಾರ್ಥಿಗಳಿಗೆ ಒಂದು ಕೋಟಿ 41 ಲಕ್ಷ ಸುಜ್ಞಾನನಿಧಿ, ಹಾಗೂ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ 18 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನೀಡಿದ್ದು ಪ್ರತಿ ತಿಂಗಳಿಗೆ ಒಂದು ಲಕ್ಷ 44 ಸಾವಿರ ವ್ಯಯ ಮಾಡುತ್ತಿರುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸಿದ್ದಕಟ್ಟೆ ವಲಯ ಅಧ್ಯಕ್ಷ ಸದಾನಂದ ಶೀತಾಲ ಉಪಸ್ಥಿತರಿದ್ದರು.ತುಂಬೆ ವಲಯ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.