Published
5 months agoon
By
Akkare Newsಪುತ್ತೂರು: ವಿಶ್ವ ಜನ ಸಂಖ್ಯೆಯ ದಿನವನ್ನು ಯಾರೂ ಗಂಭಿರವಾಗಿ ಪರಿಗಣಿಸದಿರುವುದೇ ಜನಸಂಖ್ಯೆ ಏರಿಕೆಗೆ ಕಾರಣವಾಗಿದೆ. ಭಟ್ ‘ಇಟ್ ಈಸ್ ಎ ಡೇಂಜರರ್ಸ್ ಡಿಸೀಸ್’ ಇದಕ್ಕೆ ಕಂಟ್ರೋಲ್ ಇಲ್ಲಾಂದ್ರೆ ದೇಶದ ಆರ್ಥಿಕ ಪರಿಸ್ಥಿತಿಗೆ ತೊಂದರೆ ಆಗಬಹುದು.
ಇದು ಕ್ಯಾನ್ಸರ್ ನಂತೆ ನಿದಾನವಾಗಿ ಹರಡುತ್ತದೆ.
ಇದನ್ನು ಹತೋಟಿಯಲ್ಲಿ ಇಡುವ ನಿಟ್ಟಿನಲ್ಲಿ ಜಾಗೃತಿ ಅಗತ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ದ.ಕ ಜಿ.ಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಛೇರಿ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಛೇರಿ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ ಆ.3 ರಂದು ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ – 2024 ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆಯಿಂದಾಗುವ ಪರಿಣಾಮವನ್ನು ತಿಳಿಯಲು ಜನಸಂಖ್ಯೆ ದಿನಾಚರಣೆ ಮಾಡಲಾಗುತ್ತಿದೆ.
ಯುವ ಪೀಳಿಗೆಗಳಿಗೆ ಇದನ್ನು ಮನದಟ್ಟು ಮಾಡುವ ಅಗತ್ಯವಿದೆ. ದೇಶದ ಬಗ್ಗೆ ಆಗುವ ತೊಂದರೆಗಳ ಕುರಿತು ಅರಿವು ಬಹುಶಃ ಯಾರಿಗೂ ಇಲ್ಲ ಎಂಬುದು ನನ್ನ ಅನಿಸಿಕೆ ಇದರ ಜೊತೆಗೆ ಪಠ್ಯ ಪುಸ್ತಕದಲ್ಲೂ ಇದರ ಬಗ್ಗೆ ಒಂದು ಸಭೆಕ್ಟ್ ಇದೆ ಎಂಬುದು ಕೂಡಾ ಗೊತ್ತಿಲ್ಲ.
ಹಾಗಾಗಿ ಪಠ್ಯ ಪುಸ್ತಕದಲ್ಲೂ ಕೂಡಾ ಜನಸಂಖ್ಯೆಯಿಂದ ಅಗುವ ತೊಂದರೆಯ ಕುರಿತು ಜನರಿಗೆ ಮನವರಿಕೆ ಮಾಡುವ ಕುರಿತು ಪ್ರಕಟಣೆ ಮಾಡುವ ಕೆಲಸ ಆಗಬೇಕು ಎಂದರು.
ಇವತ್ತು ಕರ್ನಾಟಕದಲ್ಲಿ 4.8 ಕೋಟಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28.8 ಲಕ್ಷ ಜನಸಂಖ್ಯೆ ಇದೆ. ಇದೇ ರೀತಿ ಮುಂದುವರಿದರೆ ನಮ್ಮಲ್ಲಿರುವ ಆರ್ಥಿಕ ಪರಿಸ್ಥಿತಿಗೆ ಹೊಡೆತವಾಗುತ್ತದೆ. ಅಭಿವೃದ್ಧಿಗೆ ತೊಡಕಾಗುತ್ತದೆ.
ನೆರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುವುದಿಲ್ಲ. ಹಾಗಾಗಿ ಜಾತಿ ಧರ್ಮ ಮತ ಎಲ್ಲವನ್ನು ಬಿಟ್ಟು ಜನಸಂಖ್ಯೆ ಸ್ಫೋಟಕ್ಕೆ ನಿಯಂತ್ರಣ ಹಾಕುವ ಕರ್ತವ್ಯ ನಮ್ಮೆಲ್ಲರಲ್ಲಿ ಇದೆ. ಇಲ್ಲಂತಾದರೆ ನಮ್ಮ ದೇಶದಲ ಆಸ್ತಿ ವಿಂಗಡೆಯಾಗಿ ಕೊನೆಗೆ ನಿವೇಶನ ರಹಿತರೇ ಎಷ್ಟೋ ಜನ ನಮ್ಮ ದೇಶ, ತಾಲೂಕಿನಲ್ಲಿ ತುಂಬುವ ಸಾಧ್ಯತೆ ಇದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸಬೇಕೆಂದು ಅವರು ವಿನಂತಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಮಿತಾ ನಾಯ್ಕ ಅವರು ಮಾತನಾಡಿ ಭಾರತ ಜನಸಂಖ್ಯೆ 144 ಕೋಟಿ ದಾಟಿದ್ದು, ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದು ಹೆಗ್ಗಳಿಕೆ ವಿಚಾರ ಅಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಅವರು ಜನಸಂಖ್ಯೆ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.
ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ಮಾತನಾಡಿ ಜನಸಂಖ್ಯೆ ಒತ್ತಡಕ್ಕೆ ಭೂಮಿಯಲ್ಲಿರುವ ನಿವೇಶನವೇ ಭರಿದಾಗುವ ಸಾಧ್ಯತೆ ಇದೆ. ಜನಸಂಖ್ಯೆ ನಿಯಂತ್ರಣಕ್ಕೆ ಹೇಗೆ ಕಡಿವಾಣ ಹಾಕುವುದು ಎಂಬ ಜಿಜ್ಞಾಸೆ ಎಲ್ಲರಲ್ಲೂ ಇದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮ ಬಹಳ ಅಗತ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಸೌಲಭ್ಯದಲ್ಲಿ ಕೊರತೆ ಉಂಟಾಗುತ್ತದೆ. ಒಳ್ಳೆಯ ಶಿಕ್ಷಣ, ಉತ್ತಮ ಮೂಲಭೂತ ಸೌಕರ್ಯ ಬೇಕಾದರೆ ಜನಸಂಖ್ಯೆ ನಿಯಂತ್ರಣ ಮಾಡಲೇಬೇಕಾದಿತು. ಇವತ್ತು ವಿದ್ಯಾವಂತರಾಗಿ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ದೊಡ್ಡ ಪರಿಣಾಮ ಎದುರಿಸಬೇಕಾದಿತು. ಇದು ಮರಳಲ್ಲಿ ಅಣೆಕಟ್ಟು ಕಟ್ಟಿದಂತಾಗಬಹುದು ಎಂದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಆರೋಗ್ಯಕರ ಜೀವನ, ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ನಾವು ಬದುಕಲು ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದರು.
ಕುಟುಂಬ ಕಲ್ಯಾಣ ಯೋಜನೆಯಲ್ಲಿ ಉತ್ತಮ ಕಾರ್ಯ ಸಾಧಿಸಿದವರಿಗೆ ಪ್ರಶಸ್ತಿ ಪತ್ರ ವಿತರಣೆ:
ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ 2023-24ನೇ ಸಾಲಿನಲ್ಲಿ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಉತ್ತಮ ಕಾರ್ಯಸಾಧನೆ ಮಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ
ಕುಸುಮಾ, ಸರ್ವೆಯ ಆಶಾ ಕಾರ್ಯಕರ್ತೆ ನಳಿನಾಕ್ಷಿ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಶಸ್ತಿ ಗಳಿಸಿತು.
ಮಕ್ಕಳಿಗೆ ರೀಲ್ಸ್ ಸ್ಪರ್ಧೆ
ಜನಸಂಖ್ಯೆ ಸ್ಫೋಟ ಕುರಿತು ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಸ್ಪರ್ಧೆ ನಡೆಸಲಾಗಿದ್ದು, ಅದರಲ್ಲಿ ಬೆಟ್ಟಂಪಾಡಿ ಪ್ರ.ದ ಕಾಲೇಜಿನ ಕು.ಅನನ್ಯಾ (ಪ್ರ), ಹೆಚ್‌ಪಿಆರ್ ಪ್ಯಾರಮೆಡಿಕಲ್‌ನ ಪಾತಿಮಾ ಮತ್ತು ತಂಡ(ದ್ವಿ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರತೀಶ್(ತ) ಸ್ಥಾನ ಪಡೆದು ಕೊಂಡಿದ್ದು ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಎನ್‌ಎಸ್‌ವಿ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪುತ್ತೂರು ದ್ವಿತಿಯ ಸ್ಥಾನ
ಜನಸಂಖ್ಯೆ ನಿಯಂತ್ರಣದ ಎನ್‌ಎಸ್‌ವಿ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷ ರಾಜ್ಯದಲ್ಲಿ ಪುತ್ತೂರು ಪ್ರಥಮ ಸ್ಥಾನ ಪಡೆದು ಕೊಂಡಿದ್ದು, ಈ ಬಾರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಕಾರ್ಯಯೋಜನೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ತಿಂಗಳಾಡಿ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ವಿದ್ಯಾ, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿದ್ಯಾ, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಕ್ಷತಾ, ಈಶ್ವರಮಂಗಲ ಆರೋಗ್ಯ ಕೇಂದ್ರದ ನಂದಿನಿ, ಸರ್ವೆ ಆರೋಗ್ಯ ಕೇಂದ್ರದ ವಿಜಯಲಕ್ಷ್ಮೀ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ತ್ರಿವೇಣಿ ಮತ್ತು ವೀಣಾ, ಕಡಬ ಸಮುದಾಯ ಆರೋಗ್ಯ ಕೇಂದ್ರದ ದಯಾಕಿರಣ್, ಉಪ್ಪಿನಂಗಡಿ ಅರೋಗ್ಯ ಕೇಂದ್ರದ ದಮಯಂತಿ, ಶಿರಾಡಿ ಆರೋಗ್ಯ ಕೇಂದ್ರದ ಉಷಾ, ನೆಲ್ಯಾಡಿ ಆರೋಗ್ಯ ಕೇಂದ್ರದ ಲೀನಾ, ಕೊಯಿಲ ಆರೋಗ್ಯ ಕೇಂದ್ರದ ಲಲಿತಾ ಮತ್ತು ಈಶ್ವರಮಂಗಲ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ರಶ್ಮಿ, ನಂದಿನಿ, ತಿಂಗಳಾಡಿಯ ವಿಜಯಶ್ರೀ, ಚೇತನಾ, ಪಾಣಾಜೆಯ ಯಶೋದ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.