Published
5 months agoon
By
Akkare Newsಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯ ಉಳುಮೆಗೆ ಇಂದು ಚಾಲನೆ ನೀಡಲಾಯಿತು.
ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು.
ಶಾಸಕ ಅಶೋಕ್ ಕುಮಾರ್ ರೈ ಅವರು ತೆಂಗಿನ ಕಾಯಿ ಒಡೆದು ಟ್ಯಾಕ್ಟರ್ ಮೂಲಕ ಗದ್ದೆ ಉಲುಮೆಗೆ ಚಾಲನೆ ನೀಡಿ ಮಾತನಾಡಿ, ಪುಣ್ಯದ ಗದ್ದೆಯಲ್ಲಿ ಭಕ್ತಾಧಿಗಳ ಆಶಯದಂತೆ ಭತ್ತದ ಬೇಸಾಯ ಆರಂಭಿಸಿದ್ದೇವೆ. ಇಲ್ಲಿ ಕೇವಲ ಆರಂಭ ಮಾಡುವುದು ಮಾತ್ರವಲ್ಲ ವ್ಯವಸ್ಥಿತವಾಗಿ ಮಾಡಬೇಕು.
ಇದು ಮಾದರಿಯಾಗಬೇಕು. ಯಾಕೆಂದರೆ ಕಳೆದ ವರ್ಷವು ನಾನು ಬೇಸಾಯದ ಆರಂಭಕ್ಕೆ ಬಂದಿದ್ದೆ.ಆದರೆ ಒಂದೂವರೆ ತಿಂಗಳಾದ ಬಳಿಕ ಇದು ಭತ್ತ ಕೃಷಿಯ, ಕಸವಾ ಎಂದು ಗೊತ್ತಾಗುತ್ತಿರಲಿಲ್ಲ.
‘
ಹಾಗಾಗಿ ಈ ಭಾರಿ ಶ್ರೀ ಕ್ಷೇ. ಧ. ಗ್ರಾ. ಯೋಜನೆಯವರನ್ನು ಮತ್ತು ಕೃಷಿ ಇಲಾಖೆಯವರನ್ಬು ಜೋಡಿಸಿಕೊಂಡಿದ್ದೆವೆ. ಭತ್ತ ಬಿತ್ತನೆ ಮಾಡುವುದು ಮಾತ್ರವಲ್ಲ, ಈ ಬೇಸಾಯದಿಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗುವ ತನಕ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕೆಂಬ ಕಲ್ಪನೆ ಇದೆ ಎಂದರು.