Published
5 months agoon
By
Akkare Newsಕಡಬ: ಮನೆಯಿಂದ ನಾಪತ್ತೆಯಾಗಿದ್ದ ಬಳ್ಪದ ಯುವಕನ ಮೃತ ದೇಹ ಬುಧವಾರ ಹೊಳೆಯಲ್ಲಿ ಪತ್ತೆಯಾಗಿದೆ.
ಕಡಬ ತಾಲೂಕು ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33 ವ)ಎಂಬ ಯುವಕ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು.ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಪಂಜ ಹೊಳೆಯ ಪಲ್ಲೋಡಿ ಅಡ್ಕದಲ್ಲಿ ಮೃತ ದೇಹವನ್ನು ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಳ್ಯದ ಮುಳುಗು ತಜ್ಞರ ತಂಡ ಸಂಪಾಜೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಪ್ರಗತಿ ಅಂಬ್ಯುಲೆನ್ಸ್ ನ ಅಬ್ದುಲ್ ರಜಾಕ್ (ಅಚ್ಚು), ಚಿದಾನಂದ ಗೂನಡ್ಕ , ಶ್ರೀ ಮುತ್ತಪ್ಪನ್ ಅಂಬ್ಯುಲೆನ್ಸ್ ನ ಅಭಿ ಸುಳ್ಯ ಪಾಲ್ಗೊಂಡಿದ್ದರು.
ಊರವರು , ಸಂಬಂಧಿಕರು ,ನಿಂತರ ಹುಡುಕಾಟ ನಡೆಸಿ, ಸಹಕರಿಸಿರುವುದಾಗಿ ತಿಳಿದು ಬಂದಿದೆ