Published
5 months agoon
By
Akkare Newsಮೈಸೂರು: “ಹುಲಿ” ಅನ್ನೋ ಮದ್ಯ ಇದೀಗ ಕರ್ನಾಟಕ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ತಯಾರಾದ ಇಂಡಿಯಾದ ಮೊದಲ ಜಾಗರಿ ರಮ್ ಇದಾಗಿದೆ.
ಭಾರತದಲ್ಲಿ ಹಲವು ಬ್ರ್ಯಾಂಡ್ ರಮ್‌ಗಳಿವೆ. ಆದರೇ ಅದೆಲ್ಲಾ ಬೇರೆ ವಿದೇಶದ್ದು. ಇದೀಗ ಭಾರತ ತನ್ನದೇ ಆದ ವಿಶೇಷ ರಮ್ ತಯಾರಿಸಿದೆ. ಇದು ನಮ್ಮ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ ಅನ್ನೋದು ಮತ್ತೊಂದು ವಿಶೇಷ. ಬರೋಬ್ಬರಿ 8 ವರ್ಷಗಳ ಸತತ ಪರಿಶ್ರಮದ ಮೂಲಕ ಇದೀಗ ಕನ್ನಡ ಹೆಸರಿನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಹುಲಿ ರಮ್ ಬಿಡುಗಡೆಗೆ ಸಜ್ಜಾಗಿದೆ.
ಭಾರತದಲ್ಲಿ ಮೊದಲ ಬಾರಿಗೆ ನಂಜನಗೂಡಿನ ಮೈಕ್ರೋ ಡಿಸ್ಟಲರಿಯಲ್ಲಿ ವಿಶ್ವದರ್ಜೆಯ ಬೆಲ್ಲದ ರಮ್ ತಯಾರಿಸಿದೆ. ನಂಜನಗೂಡಿನಲ್ಲಿ ತಯಾರಾಗಿರುವ ಈ ಹುಲಿ, ಸಿಂಗಲ್ ಒರಿಜಿನ್ ಜಾಗರಿ ರಮ್. ಆಗಸ್ಟ್ 15ರಂದು ದೇಶಾದ್ಯಂತ ಮಾರುಕಟ್ಟೆಗೆ ಪ್ರವೇಶಿಸಲಿದೆ.