ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶುಭಾರಂಭ

ಪುತ್ತೂರಿನಲ್ಲಿ ನೆಸ್ಟ ಯುನಿಸೆಕ್ಸ್ ಸಲೂನ್ ಶುಭಾರಂಭ – ಆ.31ರವರೆಗೆ ಶೇ.25ರಷ್ಟು ರಿಯಾಯಿತಿ

Published

on

*ಗ್ರಾಹಕ ಗುಣಮಟ್ಟದ ಸೇವೆ ಅವಲಂಭಿತ – ಅಶೋಕ್ ಕುಮಾರ್ ರೈ
*ಸಂಸ್ಥೆಯಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸುವ ಕೆಲಸ ಆಗಿದೆ – ಸಂಜೀವ ಮಠಂದೂರು
*ಉದ್ಯಮ ಜಿಲ್ಲೆಯಾದ್ಯಂತ ಪಸರಿಸಲಿ – ಸೀತಾರಾಮ ರೈ ಕೆದಂಬಾಡಿಗುತ್ತು
*ಗ್ರಾಹಕರಿಗೆ ತೃಪ್ತಿಯಾಗುವ ಸೇವೆ ನಿರಂತರ ನಡೆಯಲಿ – ಮೌರೀಸ್ ಮಸ್ಕರೇನಸ್
*ಪುತ್ತೂರಿನ ಹಿರಿಮೆ ಹೆಚ್ಚಿಲು ಇಂತಹ ಸಂಸ್ಥೆ ಅಗತ್ಯ – ಅಬೂಬಕ್ಕರ್ ಸಿದ್ದಿಕ್


 

 

ಪುತ್ತೂರು: ಆಧುನಿಕ ಸೌಂದರ್ಯದ ವಿಕಸನ ಮತ್ತು ಅನ್ವೇಷಣೆಗೆ ತಕ್ಕಂತೆ ಹೇರ್ ಸ್ಟೈಲ್ ಮತ್ತು ತಜ್ಞರಿಂದ ಗುಣಮಟ್ಟದ ಉತ್ಕೃಷ್ಟ ಸೌಂದರ್ಯ ಮತ್ತು ಅಂದಗೊಳಿಸುವ ಸೇವೆಯನ್ನು ನೀಡುವ ನೂತನ ಸಂಸ್ಥೆ ’ನೆಸ್ಟ ಯುನಿಸೆಕ್ಸ್ ಸಲೂನ್’ ಆ.10ರಂದು ಪುತ್ತೂರು ಬೊಳುವಾರಿನಲ್ಲಿರುವ ಹೊಟೇಲ್ ನ್ಯೂ ಹರಿಪ್ರಸಾದ್ ಎದುರಿನ ಶ್ರೀ ದುರ್ಗಾಕೃಪ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಸಂಪ್ಯ ಮಸೀದಿ ಅಧ್ಯಕ್ಷ ಅಬ್ದುಲ್ ಜಲೀಲ್ ಹಾಜಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ನೂತನ ಹವಾನಿಯಂತ್ರಿತ ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ಕೊಠಡಿ ’ನೆಸ್ಟ ಯುನಿಸೆಕ್ಸ್ ಸಲೂನ್’ ಉದ್ಘಾಟಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಪುತ್ತೂರಿನಲ್ಲಿ ಉದ್ಯಮಗಳು ಬರಬೇಕು. ಉದ್ಯೋಗಗಳು ಸೃಷ್ಟಿಯಾಗಬೇಕೆಂಬುದು ನನ್ನ ಕನಸು. ಬೇಕಾದಷ್ಟು ಜನರಿಗೆ, ಅದರಲ್ಲೂ ಮಹಿಳೆಯರಿಗೆ ಐಟಿ, ಇಂಡಸ್ಟ್ರೀಸ್‌ನಲ್ಲಿ ಉದ್ಯೋಗ ಸಿಗುತ್ತಿವೆ. ಇದರ ಜೊತೆಗೆ ಬ್ಯೂಟಿಷಿಯನ್ ಕೋರ್ಸ್‌ಗಳಿಂದಾಗಿ ಇವತ್ತು ಮಹಿಳೆಯರು ಆರ್ಥಿಕ ಸ್ವಾವಲಂಭಿತರಾಗುತ್ತಿದ್ದಾರೆ.

ನೂತನ ಸಂಸ್ಥೆಯಲ್ಲಿ ಸುಮಾರು ಎಂಟರಿಂದ ಹತ್ತು ಜನರಿಗೆ ಉದ್ಯೋಗ ಸಿಕ್ಕಿದೆ. ಇವೆಲ್ಲಕ್ಕಿಂತ ಗ್ರಾಹಕಗೆ ಗುಣಮಟ್ಟದ ಸೇವೆ ನೀಡುವುದು ಮುಖ್ಯ. ಯಾಕೆಂದರೆ ಗ್ರಾಹಕ ಯಾವತ್ತೂ ಕೂಡಾ ಗುಣಮಟ್ಟದ ಸೇವೆಗೆ ಅವಲಂಭಿತನಾಗಿರುತ್ತಾನೆ. ಇಲ್ಲಿರುವ ಸಿಬ್ಬಂದಿಗಳು ಇದು ನನ್ನ ಸಂಸ್ಥೆ ಎಂದು ತಿಳಿದು ಕೆಲಸ ಮಾಡಬೇಕು. ಆಗ ಉದ್ಯಮ ಯಶಸ್ವಿಯಾಗುತ್ತದೆ. ನೂತನ ನೆಸ್ಟ ಯುನಿಸೆಕ್ಸ್ ಸಲೂನ್ ಗುಣಮಟ್ಟದ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

 

 

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಮಾಜದಲ್ಲಿ ಪರಿವರ್ತನೆ ಆದಂತೆ ವ್ಯಕ್ತಿಗಳ ವ್ಯಕ್ತಿತ್ವದಲ್ಲೂ ಪರಿವರ್ತನೆ ಆಗುತ್ತಿದೆ. ವ್ಯಕ್ತಿ ನಿರಂತರ ಚಟುವಟಿಕೆಯ ಕೇಂದ್ರವಾಗಿ, ನಿರಂತರ ಆರೋಗ್ಯವಂತನಾಗಿರಬೇಕಾದರೆ ಆತ ಮಾನಸಿಕವಾಗಿ ನೆಮ್ಮದಿಯಿಂದಿರಬೇಕು. ಆ ನೆಮ್ಮದಿ ಇರಬೇಕಾದರೆ ಶಾರೀಕರವಾಗಿ ನೆಮ್ಮದಿಯಲ್ಲಿರಬೇಕು. ಈ ನಿಟ್ಟಿಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸುವ ಕೆಲಸ ಇವತ್ತು ಇಂತಹ ನೆಸ್ಟ ಯುನಿಸೆಕ್ಸ್ ಸಲೂನ್ ಮಾಡಲಿದೆ ಎಂದ ಅವರು ವಿದೇಶದಲ್ಲಿ ಕಾಣುವ ಎಲ್ಲಾ ವ್ಯವಸ್ಥೆ ಸ್ವದೇಶದಲ್ಲೂ ಬಂದಿದೆ. ಒಂದಷ್ಟು ಜನರಿಗೆ ಉದ್ಯೋಗ ಕೊಡುವ ಕೆಲಸವೂ ಆಗಿದೆ. ಪುತ್ತೂರಿನ ಜನತೆ ಪೂರ್ಣ ಸಹಕಾರ ಈ ಸಂಸ್ಥೆಗೆ ನೀಡಲಿದ್ದಾರೆ ಎಂದರು.

 

ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಮಾತನಾಡಿ ಸಂಸ್ಥೆಯ ಪಾಲುದಾರರಾಗಿರುವ ಸನದ್ ಮತ್ತು ನೌಫಲ್ ನಮಗೆ ಬಹಳ ಆತ್ಮೀಯರು. ಇವರು ಹುಟ್ಟು ಹಾಕಿದ ಸಂಸ್ಥೆ ಪುತ್ತೂರು ನಗರದಲ್ಲಿ ಬೃಹತ್ ಉದ್ಯಮವಾಗಿ ಬೆಳೆದು ಜಿಲ್ಲೆಯಾದ್ಯಂತ ಪಸರಿಸಲಿ. ಹತ್ತು ಜನರಿಗೆ ಉದ್ಯೋಗ ಕೊಡುವ ವ್ಯಕ್ತಿಯಾಗಿ ಅವರು ರೂಪುಗೊಳ್ಳಲಿ ಎಂದರು.

ಮಾಯಿದೆ ದೇವುಸ್ ಚರ್ಚ್‌ನ ಮಾಜಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಅವರು ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕ ವಾತಾವರಣ ನಿರ್ಮಾಣ ಆಗಿದೆ. ನಮ್ಮ ಸೌಂದರ್ಯದ ಆರೈಕೆಗೆ ಇಂತಹ ಸಂಸ್ಥೆ ಅಗತ್ಯ. ಯುವಕರು ಸೇರಿ ಹುಟ್ಟಿ ಹಾಕಿದ ಈ ಸಂಸ್ಥೆಯಿಂದ ಗ್ರಾಹಕರಿಗೆ ತೃಪ್ತಿಯಾಗುವ ರೀತಿಯಲ್ಲಿ ಸೇವೆ ನಿರಂತರ ಸಿಗಲಿ. ಸಂಸ್ಥೆಯ ಶಾಖೆಗಳು ಹುಟ್ಟಿಕೊಳ್ಳಲಿ ಎಂದರು.
ತೆರಿಗೆ ಸಲಹೆಗಾರ ಅಬೂಬಕ್ಕರ್ ಸಿದ್ದಿಕ್ ಅವರು ಮಾತನಾಡಿ ಉತ್ತಮ ಮನೆತನದಿಂದ ಬಂದ ಇಬ್ಬರು ಯುವಕರು ಪುತ್ತೂರಿಗೆ ಒಂದೇ ಸೂರಿನಡಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸೌಂದರ್ಯ ಸೌಲಭ್ಯದ ವ್ಯವಸ್ಥೆ ಕಲ್ಪಿಸಿದ್ದಾರೆ. ಪುತ್ತೂರಿನ ಹಿರಿಮೆ ಹೆಚ್ಚಿಸಲು ಇಂತಹ ಸಂಸ್ಥೆಗಳು ಬರಬೇಕು. ಈ ಸಂಸ್ಥೆಯ ಬೆಳವಣಿಗೆಯಿಂದಾಗಿ ನಾವು ಇತರರಿಗೆ ಮಾದರಿಯಾಗಬೇಕು. ಸಂಸ್ಥೆಯ ಸೇವೆಯನ್ನು ಇನ್ನೊಬ್ಬರು ಪ್ರಶಂಸಿಸಬೇಕೆಂದು ಅವರು ಹೇಳಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎಮ್‌ಡಿ ಡಾ.ಶ್ರೀಪತಿ ರಾವ್, ಬೊಳ್ವಾರ್ ಮಟನ್ ಸ್ಟಾಲ್‌ನ ಕೆ.ಮೊಹಮ್ಮದ್ ಹಾಜಿ, ಮಂಗಳೂರು ನೋಬೆಲ್ ಸ್ಕೂಲ್‌ನ ಸಂಚಾಲಕ ಮೊಹಮ್ಮದ್ ಶಾರಿಕ್, ಸನದ್ ಯುಸೂಪ್ ಅವರ ತಂದೆ ಇಂಜಿನಿಯರ್ ಕೆ.ಹೆಚ್.ಅಬ್ದುಲ್ಲ, ನೌಫಲ್ ಅವರ ತಂದೆ ನೆಕ್ಕಿಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಶೇಖಬ್ಬ ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಸನದ್ ಯುಸೂಪ್, ನೌಫಲ್ ಎನ್ ಅತಿಥಿಗಳನ್ನು ಬರಮಾಡಿಕೊಂಡರು. ಸಿದ್ದಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.

ವಿಶಾಲವಾದ ಶ್ರೇಣಿಯಲ್ಲಿರುವ ಸಂಸ್ಥೆಯಲ್ಲಿ ಬೆರಗುಗೊಳಿಸುವ ನೋಟದಿಂದ ಪುರುಷರು ಮತ್ತು ಮಹಿಳೆಯರಿಗಾಗಿ ಉನ್ನತ ದರ್ಜೆಯ ಕೇಶವಿನ್ಯಾಸದವರೆಗೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲಾಗುವುದು. ಆಧುನಿಕ ಸೌಂದರ್ಯದ ವಿಕಸನ ಮತ್ತು ಅನ್ವೇಷಣೆಯೊಂದಿಗೆ ಸಂಸ್ಥೆಯ ಹೇರ್ ಸ್ಟೈಲಿಸ್ಟ್‌ಗಳು ಮತ್ತು ತಜ್ಞರು ಹೇರ್‌ಕಟ್‌ ಮತ್ತು ಕೂದಲಿನ ವಿನ್ಯಾಸಕ್ಕೆ ಗುಣಮಟ್ಟದ ಉತ್ತಮ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಬಳಸಿಕೊಂಡು ಹೇರ್ ಟ್ರೀಟ್‌ಮೆಂಟ್‌ಗಳವರೆಗೆ ವ್ಯಾಪಕ ಶ್ರೇಣಿಯ ಸೌಂದರ್ಯ ಮತ್ತು ಅಂದಗೊಳಿಸುವ ಸೇವೆಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರರಾದ ಸನದ್ ಯುಸೂಪ್ ಮತ್ತು ನೌಫಲ್ ಎನ್ ತಿಳಿಸಿದ್ದಾರೆ.

ನೆಸ್ಟ ಯುನಿಸೆಕ್ಸ್ ಸಲೂನ್‌ನ ಶುಭಾರಂಭದ ಅಂಗವಾಗಿ ಸಂಸ್ಥೆಯಿಂದ ಸಿಗುವ ಎಲ್ಲಾ ಸೇವೆಗಳು ಮತ್ತು ಮಹಿಳೆಯರ ಸೌಂದರ್ಯ ಸೇವೆಗಳ ಮೇಲೆ ಶೇ.25ರಷ್ಟು ರಿಯಾಯಿತಿ ಇದ್ದು, ಈ ಅವಕಾಶ ಆ.31ರ ತನಕ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಸಂಸ್ಥೆಯಲ್ಲಿ ಪುರುಷರು ಸೇರಿದಂತೆ ಮಹಿಳೆಯರಿಗಾಗಿ ವ್ಯಾಕ್ಸಿಂಗ್, ಥ್ರೆಡಿಂಗ್, ಮೆಹಂದಿ, ಪಾದೋಪಚಾರ, ಫೇಶಿಯಲ್, ಕೂದಲಿನ ಆರೈಕೆ ಮತ್ತು ಸ್ಟೈಲಿಂಗ್, ಚರ್ಮದ ಆರೈಕೆ ಚಿಕಿತ್ಸೆಗಳು ಮತ್ತು ನಿಯಮಿತ ಆರೈಕೆ ಮತ್ತು ವಿಶೇಷ ಸಂದರ್ಭಗಳಲ್ಲಿ ಮೇಕಪ್ ಸೇವೆ ವಿವಿಧ ಶ್ರೇಣಿಗಳಲ್ಲಿ ಲಭ್ಯವಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement