ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನಾಳೆ ಪುತ್ತೂರಿನಲ್ಲಿ ಪಿಡಿಒ/ವಿಎಒ/ಎಸ್ ಡಿ ಸಿ ಸಿ ಬ್ಯಾಂಕ್/ರೈಲ್ವೆ/ಪೊಲೀಸ್ ನೇಮಕಾತಿಗಳ ಪ್ರಯತ್ನದಲ್ಲಿರುವವರಿಗೆ ಉಚಿತ ತರಬೇತಿ

Published

on

ದಕ್ಷಿಣ ಕನ್ನಡ ಜಿಲ್ಲೆಯ ಸ್ಪರ್ಧಾತ್ಮಕ ಯುಗದ ಇತಿಹಾಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ವಿವಿಧ ಆಯಾಮಗಳಲ್ಲಿ ಯುವ ಜನತೆಯಲ್ಲಿ ಅರಿವನ್ನು ಮೂಡಿಸಿ ಕಳೆದ ಹಲವು ವರ್ಷಗಳಿಂದ ಈಚೆಗೆ 150ಕ್ಕೂ ಅಧಿಕ ಯುವ ಸ್ಪರ್ಧಾರ್ಥಿಗಳು ಬ್ಯಾಂಕಿಂಗ್, ಪೊಲೀಸ್, ಅಗ್ನಿಪಥ್, ಕ್ಯಾಂಪ್ಕೋ, ಕೆಎಂಎಫ್ ಸೇರಿದಂತೆ ವಿವಿಧ ನೇಮಕಾತಿ

 

ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ಸರಕಾರಿ ಉದ್ಯೋಗ ಗಿಟ್ಟಿಸಿ ಕೊಳ್ಳುವಲ್ಲಿ ಮಹತ್ತರ ಪಾತ್ರ ನಿಭಾಯಿಸಿರುವ ವಿದ್ಯಾಮಾತಾ ಅಕಾಡೆಮಿಯು ಇದೀಗ ಸದ್ಯ ಓದುತ್ತಿರುವ ಮತ್ತು ಓದು ಮುಗಿಸಿರುವ ಹಾಗೂ ಸರಕಾರಿ ಉದ್ಯೋಗವನ್ನು ಅರಸುತ್ತಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸರಕಾರಿ ನೇಮಕಾತಿ ಪರೀಕ್ಷೆಗಳ ಪೂರ್ವ ತಯಾರಿಗೆ ಸಂಬಂದಿಸಿದಂತೆ ದಿನಾಂಕ 11.08.2024 ಆದಿತ್ಯವಾರದಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 03ರ ವರೆಗೆ ತರಬೇತಿಯನ್ನು ಆಯೋಜಿಸಿದ್ದು, ಈ ತರಬೇತಿಗೆ ಸದ್ಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಹಾಗೂ ಓದು ಮುಗಿಸಿರುವ ವಿದ್ಯಾರ್ಥಿಗಳು ಹಾಗೂ ಸರಕಾರಿ ಉದ್ಯೋಗವನ್ನು ಅರಸುತ್ತಿರುವವರಿಗೆ ಪುತ್ತೂರು ನಗರ ಠಾಣಾ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ಚಿಕ್ಕಬಳ್ಳಾಪುರದ ಖ್ಯಾತ ತರಬೇತುದಾರರಾದ ರಘುನಾಥ್ ರವರ ನೇತೃತ್ವದಲ್ಲಿ ನಡೆಯಲಿರುವ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

 

 

ಈ ತರಬೇತಿಗೆ ಹಾಜರಾಗಲು ಇಚ್ಛಿಸುವವರು ವಿದ್ಯಾಮಾತಾ ಅಕಾಡೆಮಿಯ ಕಛೇರಿಯನ್ನು ಸಂಪರ್ಕಿಸುವ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 

 


 

Continue Reading
Click to comment

Leave a Reply

Your email address will not be published. Required fields are marked *

Advertisement