Published
8 months agoon
By
Akkare Newsಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಕೆ. ಪಿ. ಎಸ್. ಪ್ರೌಢಶಾಲೆ ಕೆಯ್ಯೂರುನಲ್ಲಿ ಆ. 7ರಂದು ಜರುಗಿದ ಕ್ಲಸ್ಟರ್ ಮಟ್ಟದ ಚೆಸ್ ಪಂದ್ಯಾಟದಲ್ಲಿ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ 7ನೇ ತರಗತಿಯ ಆರೋಹಿ ಯಶವಂತ್ -ಪ್ರಥಮ ಸ್ಥಾನ , 9ನೇ ತರಗತಿಯ ಓಂಕಾರ್ ಎಸ್. ಪಿ.- ದ್ವಿತೀಯ ಸ್ಥಾನ, 9ನೇ ತರಗತಿಯ ಭಾಗ್ಯಶ್ರೀ .ಕೆ.ಎಸ್- 5ನೇ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಜಯಮಾಲ ವಿ ಎನ್ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ. ಇವರಿಗೆ ಕಲಾ ವಿಭಾಗದ ಶಿಕ್ಷಕರಾದ ಸುಚೇತ್, ಸಹ ಶಿಕ್ಷಕರಾದ ಮಂಜುನಾಥ್ ಇವರು ತರಬೇತಿ ನೀಡಿದ್ದಾರೆ.