Published
10 months agoon
By
Akkare Newsಕಂಬಳ ಪ್ರೇಮಿಗಳಿಗೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ಡಾ| ದೇವಿಪ್ರಸಾದ್ ಶೆಟ್ಟಿ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಬೆಂಗಳೂರಿನಲ್ಲಿ ಅ.26ರಂದು ಕಂಬಳ ನಡೆಯುವ ಮೂಲಕ ಈ ಬಾರಿಯ ಕಂಬಳ (Kambala) ಋತು ಆರಂಭವಾಗಲಿದೆ. ನಂತರ ಕರಾವಳಿಯಾದ್ಯಂತ ಕಂಬಳಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಈ ಋತುವಿನ ಕಂಬಳದ ವೇಳಾಪಟ್ಟಿ ಸಿದ್ಧಪಡಿಸಲು ಇಲ್ಲಿ ಶನಿವಾರ ಸಭೆ ಸೇರಿದ ಜಿಲ್ಲಾ ಕಂಬಳ ಸಮಿತಿ ಈ ನಿರ್ಧಾರ ಕೈಗೊಂಡಿದ್ದು ಬೆಂಗಳೂರಿನಲ್ಲಿ ಮೊದಲ ಕಂಬಳ ಅಕ್ಟೋಬರ್ 26ರಂದು ಮತ್ತು ಕೊನೆಯ ಕಂಬಳವನ್ನು ಮುಂದಿನ ವರ್ಷದ ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದೆ.
ಸದ್ಯ ಜಿಲ್ಲಾ ಕಂಬಳ ಸಮಿತಿ ನೇತೃತ್ವದಲ್ಲಿ ಒಟ್ಟು 26 ಕಂಬಳಗಳು ಈ ಸಲ ನಡೆಯಲಿವೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ಡಾ| ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸದ್ಯ ಕಂಬಳವನ್ನು ಶಿಸ್ತುಬದ್ಧವಾಗಿ ಕಂಬಳ ನಡೆಯುತ್ತಿರುವುದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದನ್ನು ಮತ್ತಷ್ಟು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಕಂಬಳ ಸಮಿತಿಗಳು ಪಾಲಿಸಬೇಕಾದ ಕೆಲವು ಉಪನಿಬಂಧನೆಗಳನ್ನು ರಚಿಸಲಾಗುವುದು. ಕಂಬಳ ಸಮಯ ನಿಯಂತ್ರಿಸಲೂ ನಿಯಮಗಳನ್ನು ರೂಪಿಸಲಾಗುವುದು. ಓಟಗಾರರು ಎಷ್ಟು ಜತೆ ಕೋಣಗಳನ್ನು ಓಡಿಸಬಹುದು ಮುಂತಾದ ನಿಯಮ ರೂಪಿಸಲಾಗುತ್ತಿದೆ ಎಂದರು.
ಅಕ್ಟೋಬರ್ 26 – ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು