Published
4 months agoon
By
Akkare Newsಕಡಬ: ನವಜೀವನ ಸಮಿತಿಯ ಪದಾಧಿಕಾರಿಗಳು ಹಾಗೂ ನವಜೀವನ ಪೋಷಕರ ಸಭೆಯು ಇಂದು ಕಡಬ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿಯವರಾದ ಈ ಸಭೆಯಲ್ಲಿ ಪೋಷಕರ ಜವಾಬ್ದಾರಿ ಹಾಗೂ ಶಿಬಿರಾರ್ಥಿಗಳ ಆಯ್ಕೆ, ನವ ಜೀವನ ಸಮಿತಿ ಸಭೆ ನಡೆಸುವ ಬಗ್ಗೆ, ಶಿಬಿರದ ಜವಾಬ್ದಾರಿ ನಿರ್ವಹಣೆಯ ಬಗ್ಗೆ, ಫ್ರೀ ಕಾನ್ಫರೆನ್ಸ್ ಆನ್ಲೈನ್ ಇನ್ ಮೀಟಿಂಗ್ ಬಗ್ಗೆ,ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ನವಜೀವನ ಸಮಿತಿಯ ವಲಯ ಅಧ್ಯಕ್ಷರಾದ ಸುಂದರ್ ರವರು ವಹಿಸಿದ್ದರು.
ನವ ಜೀವನ ಸದಸ್ಯರಾದ ಶ್ರೀ ಪೂವಪ್ಪ ರವರು ತಮ್ಮ ಅನುಭವ ಹಂಚಿಕೊಂಡರು.
ಗೋಳಿ ತೊಟ್ಟು ವಲಯದ ಸೇವಾ ಪ್ರತಿನಿಧಿ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು ಕುಂತೂರು ಸೇವಾ ಪ್ರತಿನಿಧಿ ಸವಿತಾ ರವರು ಸ್ವಾಗತಿಸಿದರು ಬಿಳಿನೆಲೆ ವಲಯದ ಸೇವಾ ಪ್ರತಿನಿಧಿ ವಿನೋದ್ ಕೆ ಸಿ ರವರು ವಂದಿಸಿದರು.