ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರ, ಭಕ್ತಕೋಡಿ S.G.M ಪ್ರೌಡಶಾಲಾ S.D.M.C ಯೊಂದಿಗೆ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಗಾರ:

Published

on

ತಾರೀಕು 20-08-2024ರಂದು ಭಕ್ತಕೋಡಿ ಎಮ್ ಜಿ ಎಮ್ ಪ್ರೌಢ ಶಾಲೆಯಲ್ಲಿ ಶಾಲಾ ಎಸ್.ಡಿ. ಎಂ. ಸಿ ಯೊಂದಿಗೆ ಸೇರಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಫ಼ೋಕ್ಸೋ ಸಮ್ಮಂದ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ಮಾಹಿತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿದ ಪುತ್ತೂರು ತಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅದ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಮದ್ಯೆ ಗೊಂದಲಗಳು ನಿರ್ಮಾಣವಾಗದ ರೀತಿಯಲ್ಲಿ ತಮ್ಮ ಅಗತ್ಯ ಪಾಠದ ಮದ್ಯೆ ಹೆಚ್ಚು ಗಮನ ಹರಿಸಿ ಕಾನೂನು ತೊಡಕುಗಳ ಬಗ್ಗೆ ಅರಿತು ಜೀವಿಸಬೇಕು,

ಒಬ್ಬ ವಿದ್ಯಾರ್ಥಿಯು ತನಗೆ 18 ತುಂಬಿದಾಗ ಮೊಬೈಲ್ ಸಿಮ್ ಪಡೆಯುವ ಹಕ್ಕುದಾರನಾದ ಸಂದರ್ಭದಲ್ಲಿ ತನ್ನ ಹೆಸರಿನಲ್ಲಿ ಮತ್ತೊಬ್ಬರಿಗೆ ಸಿಮ್ ಕರೀದಿಸಿ ಕೊಟ್ಟರೆ ಅದರಿಂದ ಆಗುವ ಅನಾಹುತದ ಬಗ್ಗೆ ವಿವರಿಸಿದರು.

ಜಿಲ್ಲಾ ಶಿಕ್ಷಣ ಒಕ್ಕೂಟದ ಅದ್ಯಕ್ಷರಾದ ಶ್ರೀಮತಿ ನಯನಾ ರೈ ಮಾತನಾಡಿ ಮಕ್ಕಳು ಲೈಂಗಿಕ ಸಮಸ್ಯೆಗೆ ಒಳಾಗಾಗುವ ಸಂದರ್ಭ ಬಂದಾಗ ನಮ್ಮ ಮುಂಜಾಗ್ರತಾ ಕ್ರಮವನ್ನು ಸರಿಪಡಿಸುವ ಬಗ್ಗೆ ವಿವರಿಸಿದರು.

ಶಿಕ್ಷಣ ಸಂಪನ್ಮೂಲ ಕೇಂದ್ರದ ಶ್ರೀಮತಿ ವತ್ಸಲಾ ನಾಯಕ್ ರವರು ಮಾತನಾಡಿ ವ್ಯಕ್ತಿ,ಸಮ್ಮಂದಿಕರ ಮತ್ತು ಸಾರ್ವಜನಿಕರಿಂದಲೋ ಅನಗತ್ಯ ಗೊಂದಲಗಳು ಬಂದಾಗ ಸಮ್ಮಂದ ಪಟ್ಥವರಿಗೆ ತಿಳಿಸುವ ಬಗ್ಗೆ ವಿವರಿಸಿದರು,ಹಾಡಿನ ಮೂಲಕ ಕಾನೂನು ಪಾಲನೆ ಮಾಡುವ ವಿಚಾರ ಮಕ್ಕಳಲ್ಲಿ ಹುಮ್ಮಸ್ಸು ನೀಡಿತು.

ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅದ್ಯಕ್ಷರಾದ ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ರೈ ಯವರು ವಿದ್ಯಾರ್ಥಿಗಳಾದ ನಮ್ಮ ಸ್ವಾತಂತ್ರ ಹೇಗಾಗಬೇಕು ,ನಮ್ಮ ಹಕ್ಕುಗಳ ಬಗ್ಗೆ ಕಾನೂನು ಏನು ಹೇಳುತ್ತದೆ, ಮತ್ತು ನಮ್ಮ ಜವಾಬ್ಧಾರಿಗಳು ಏನು ಎಂಬೂದರ ಬಗ್ಗೆ ಸವಿವರವಾಗಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷರಾದ ಜಿಲ್ಲಾ ಸಮನ್ವಯ ವೇದಿಕೆ ಉಪಾಧ್ಯಕ್ಷರು ಆಗಿರುವ ಪ್ರವೀಣ್ ಆಚಾರ್ಯ ನರಿಮೊಗರು ಸದಸ್ಯರಾದ ಹಮೀದ್ ಮಾಂತೂರು, ಭಾಸ್ಕರ,ಪ್ರೇಮಲತಾ ಕುದ್ಮಾರ್, ಸುಮತಿ ಕುದ್ಮಾರ್, ಮುಖ್ಯ ಶಿಕ್ಷಕ ಸೋಮಶೇಕರ್ ರವರು ಉಪಸ್ತಿತರಿದ್ದರು.

ರಕ್ಷಿತಾ ರೈ ಸ್ವಾಗತಿಸಿ ಮಧು ಶ್ರೀ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement