Published
4 months agoon
By
Akkare Newsಪುತ್ತೂರು; ಕೆಯ್ಯೂರು ಗ್ರಾಟಮದ ಬಜರಗಂದಳ ಮುಖಂಡ ಯುವಕನೋರ್ವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೆಯ್ಯೂರು ಗ್ರಾಮದ ಬಜರಂಗದಳ ಸುರಕ್ಷಾ ಪ್ರಮುಖ್ ಆಗಿರುವ ಉದ್ದಳೆ ನಿವಾಸಿ ಸಚಿನ್ (೨೭) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಿಸಿಎ ಪಧವೀಧರನಾಗಿರುವ ಇವರು ಕಲಿತು ಉದ್ಯೋಗದ ಹುಡುಕಾಟದಲ್ಲಿದ್ದರು. ಇವರು ಉದ್ಯೋಗ ಕೊಡಿಸಿ ಎಂದು ಹಲವಾರು ಮಂದಿಯನ್ನು ಬೇಡಿಕೊಂಡಿದ್ದರು.
ಪಕ್ಷದ ಪ್ರಮುಖರಲ್ಲಿಯೂ ಕೇಳಿಕೊಂಡಿದ್ದರು ಅದರೆ ಇವರ ಸಂಕಷ್ಟಕ್ಕೆ ಯರೂ ಸ್ಪಂದಿಸಿದ ಕರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.