Published
4 months agoon
By
Akkare Newsಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಸಮೀಪದ ಶಾಲಾ ಬಾವಿಯಲ್ಲಿ ಪತ್ತೆಯಾದ ಘಟನೆ ಕಡಬದ ಕೇನ್ಯ ಗ್ರಾಮದಿಂದ ವರದಿಯಾಗಿದೆ.
ಬೀದಿಗುಡ್ಡೆ ಸಮೀಪ ಕೇನ್ಯ ಶಾಲೆಯ ಬಳಿಯ ನಿವಾಸಿ ಬಾಬು ಪೂಜಾರಿ ಎಂಬವರು ಆ.19 ರ ಮುಂಜಾನೆ ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ.
ಮನೆಯವರು ಹುಡುಕಾಟ ನಡೆಸಿದಾಗ ಶಾಲಾ ಬಾವಿ ಕಟ್ಟೆಯಲ್ಲಿ ಲುಂಗಿ, ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಹೀಗಾಗಿ ಬಾವಿ ಹಾರಿರಬಹುದೆಂಬ ಶಂಕೆಯಿಂದ ಸ್ಥಳೀಯರು ಬಾವಿಗೆ ದೋಟಿ ಇಳಿಸಿ ಶೋಧ ನಡೆಸಿದಾಗ ಶವ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ.