ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶಾಲಾ ಚಟುವಟಿಕೆ

ಪಾಟ್ರಕೋಡಿ ಪ್ರಾಥಮಿಕ ಶಾಲೆಯಲ್ಲಿ ಕೆದಿಲ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ

Published

on

ಕೆದಿಲ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024-25 ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ 20/9/24 ರಂದು ನಡೆಯಿತು

ಈ ಕಾರ್ಯಕ್ರಮದಲ್ಲಿ ಕ್ಲಷ್ಟರ್ ಮಟ್ಟದ 9 ಶಾಲೆಗಳ 300 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಪ್ರತಿಭ ಕಾರಂಜಿ ಕಾರ್ಯವನ್ನು ಬೆಳಗ್ಗೆ 10 ಗಂಟೆಗೆ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರತಿಮಾ ಮೇಡಂ ಉದ್ಘಾಟಿಸಿದರು,

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತೀಮ ಮೇಡಂ ಹಾಗು ಕೆದಿಲ ಕ್ಲಷ್ಟರ್ CRP ಸುಧಾಕರ್ ಭಟ್ ರವರು ಪ್ರತೀಭ ಕಾರಂಜಿಯ ಅವಶ್ಯಕತೆ ಬಗ್ಗೆ ವಿವರಿಸಿದರು, ಮಾಣಿ ಕ್ಲಷ್ಟರ್ CRP ಸತೀಶ್ ರಾವ್, ಪಾಟ್ರಕೋಡಿ ಶಾಲಾ SDMC ಅಧ್ಯಕ್ಷರಾದ ಅಶ್ರಫ್ ಟಿ, ಉಪಾಧ್ಯಕ್ಷ ಉಸಮ್ಮತ್ ಇಬ್ರಾಹಿಂ, ಸದಸ್ಯರಾದ ಅಬ್ದುಲ್ ರಜಾಕ್ (ಮೋನು) ಜುಬೈರ್ ಟಿ. ಮುಸ್ತಾಪ, ರಹ್ಮತ್, ಝೊರ, ಮಾಜಿ ಅಧ್ಯಕ್ಷರಾದ ಜಬ್ಬರ್, ಶರೀಫ್ ಕೊಲ್ಪೆ, ಮಾಜಿ ಉಪಾಧ್ಯಕ್ಷರಾದ ಬದ್ರುನ್ನಿಸ ಶಾಲಾಭಿಮಾನಿಗಳಾದ ಅಬ್ದುಲ್ ಖಾದರ್ ಪಾಟ್ರಕೋಡಿ, ಕ್ಲಸ್ಟರ್ ನ ಒಂಬತ್ತು ಶಾಲೆಗಳ ಮಖ್ಯ ಗುರುಗಳು ಹಾಗು ಶಿಕ್ಷರು ಭಾಗವಹಿಸಿದರು.

ನಂತರ ಹಲವಾರು ಕ್ಲಷ್ಟರ್ ಮಟ್ಟದ ಸ್ಪರ್ಧೆಯು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ಹಾಗು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು

ಪಾಟ್ರಕೋಡಿ ಶಾಲಾ ಮುಖ್ಯೋಪಾಧ್ಯಾಯರಾದ ಉಮ್ಮರಾಗಿ ಶರಣಪ್ಪರವರು ಸ್ವಾಗತಿಸಿದರೆ ಶಿಕ್ಷಣಕರಾದ ಗುರುರಾಜ್ ಸರ್ ವಂದಿಸಿದರು,
ಶಿಕ್ಷಕರಾದ ಮುಭಾರಕ್ ಸರ್ ಕಾರ್ಯಕ್ರಮ ನಿರ್ವಹಣೆಗೈದರು

 

Continue Reading
Click to comment

Leave a Reply

Your email address will not be published. Required fields are marked *

Advertisement