Published
4 months agoon
By
Akkare Newsಸರಕಾರಿ ಶಾಲೆಗಳು ಉಳಿಯಲಿ ಬೆಳೇಯಲಿ ನೆರೆ ಹೊರೆಯ ಸಮಾನ ಶಾಲೆಗಳಾಗಲಿ ದ.ಕ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಮಟ್ಟದ ಸಮಿತಿ ರಚನೆಯನ್ನು ದಿನಾಂಕ 22/8/2024 ರಂದು ಬೆಳಿಗ್ಗೆ 10 ಗಂಟೆಗೆ ಶಿವಕೃಪಾ ಕಲಾಮಂದಿರ ಸುಳ್ಯದಲ್ಲಿ ನಡೆಯಿತು.
ಕಾರ್ಯಕ್ರಮದದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್.ಎಸ್ ಎಮ್.ನೆಲ್ಯಾಡಿ ವಹಿಸಿದರು ಸುಳ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ, ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರವೀಣ್ ಆಚಾರ್ಯ
ನರಿಮೊಗರು, ರಾಜೇಶ್ವರಿ ಕಾಫಿತೋಟ ಸುಳ್ಯ.ಜಿಲ್ಲಾ ಕಾರ್ಯದರ್ಶಿ ಕೃಷ್ಣ ನಾಯ್ಕ್ ಪುತ್ತೂರು,ಜಿಲ್ಲಾ ಜತೆಕಾರ್ಯದರ್ಶಿ ಸುಮಯ್ಯ ಕಬಕ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ
ಕೆಮ್ಮಾರ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಝೀಜ್ ಬಿ ಕೆ ಕೆಮ್ಮಾರ, ಜಿಲ್ಲಾ ಸಮಿತಿ ಸದಸ್ಯರಾದ ಸೌಕತ್ ಅಲಿ ಮೇನಾಲ ಸೇರಿ ನೂತನ ಸುಳ್ಯ ತಾಲೂಕು ಸಮಿತಿ ರಚನೆ ಮಾಡಲಾಯಿತು.
ಸುಳ್ಯ ತಾಲೂಕಿನ ನೂತನ ಸಮಿತಿಯ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ,ಉಪಾಧ್ಯಕ್ಷರುಗಳಾಗಿ ಸಂಧ್ಯಾ ದೋಳ,ಬಾಲಸುಬ್ರಹ್ಮಣ್ಯ, ಪ್ರದಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ,ಜೊತೆ ಕಾರ್ಯದರ್ಶಿ ಸೌಕತ್ ಆಲಿ ಮೇನಾಲ, ಕೋಶಾಧಿಕಾರಿ ಪಿ ರಾಮಚಂದ್ರ,ಆಯ್ಕೆ ಮಾಡಲಾಯಿತು ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷರು ಜಿಲ್ಲಾ ಸಮಿತಿ ನೂತನ ಜಿಲ್ಲಾ ಸದಸ್ಯರಾದ ಸೌಕತ್ ಅಲಿ ಮೇನಾಲರವರಿಗೆ ಐಡಿ ವಿತರಿಸಿದರು.