Published
4 months agoon
By
Akkare Newsಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಪತಿ ಮಹಾಶಯನೋರ್ವ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಪತ್ನಿ ನೀಡಿದ ದೂರಿನ ಮೇರೆಗೆ ಪತಿ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಮರ್ಯಂ ಹಾಗೂ ಅರ್ಷದ್ ಅಯೋಧ್ಯೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ನಗರದ ಸೌಂದರ್ಯ ಕಂಡ ಪತ್ನಿ ಮರ್ಯಂ ಯೋಗಿ ಮತ್ತು ಪ್ರಧಾನಿ ಮೋದಿಯನ್ನು ಹೊಗಳಿದ್ದು, ಇದನ್ನು ಸಹಿಸದ ಗಂಡ ಅರ್ಷದ್ ಮತ್ತು ಆತನ ಮನೆಯವರು ಮರ್ಯಂದಗೆ ನಿಂದನೆ ಮಾಡಿದ್ದಾರೆ. ನಂತರ ಆಕೆಯನ್ನು ಚೆನ್ನಾಗಿ ಥಳಿಸಿದ್ದು, ಬಿಸಿಯಾದ ಅಡುಗೆ ಪದಾರ್ಥಗಳನ್ನು ಮೈ ಮೇಲೆ ಎರಚಿ, ತ್ರಿವಳಿ ತಲಾಖ್ ನೀಡಿದ್ದಾನೆ.
ಕೂಡಲೇ ಮರ್ಯಂ ತನ್ನ ತಂದೆ ಮನೆಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಅರ್ಷದ್, ತಾಯಿ ರೈಶಾ, ಮಾವ ಇಸ್ಲಾಂ, ಅತ್ತಿಗೆ ಕುಲ್ಸುಂ, ಭಾವ ಫರ್ಹಾನ್, ಶಫಕ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.