Published
4 months agoon
By
Akkare Newsದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗೆ ಕ್ರಮವಹಿಸುವ ಹಿನ್ನೆಲೆಯಲ್ಲಿ ಕುಶಾಲನಗರದ ಕಾವೇರಿ ಹೋಂಡಾ ದ್ವಿಚಕ್ರ ಶೋ ರೂಂ ನಲ್ಲಿ ಸಾರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ಒಂದರಿಂದ ನಾಲ್ಕು ವರ್ಷ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದ್ದು ಈ ಬಗ್ಗೆ ಮುಂದಿನ ಮೂರು ತಿಂಗಳು ಜಾಗೃತಿ ಮೂಡಿಸಲಾಗುವುದು.
ನಂತರ ದಂಡ ವಿಧಿಸಲಾಗುವುದು ಎಂದು ರಸ್ತೆ ಸಾರಿಗೆ ಸಂಚಾರಿ ನಿಯಂತ್ರಣ ಅಧಿಕಾರಿ ನಾಗರಾಜಾಚಾರ್ ತಿಳಿಸಿದರು. ಈಗಾಗಲೇ ನಿಯಮ ಜಾರಿಗೆ ಬಂದಿದ್ದು ಅಪಘಾತ ಸಂದರ್ಭ ಮಕ್ಕಳಿಗೆ ಉಂಟಾಗುವ ಹಾನಿ ತಪ್ಪಿಸಲು ಈ ಕ್ರಮವಹಿಸಲಾಗಿದೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಎಲ್ಲೆಡೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭ ಬ್ರೇಕ್ ಇನ್ಸ್ ಪೆಕ್ಟರ್ ಎಂ. ಶಿವಕುಮಾರ್, ಕಾವೇರಿ ಹೋಂಡಾ ಶೋ ರೂಂ ಮಾಲೀಕ ವಿನೋದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.