ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಉಪ್ಪಿನಂಗಡಿ ವಲಯದ ಸರ್ವೋದಯ ಪೆರಿಯಡ್ಕ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ :

Published

on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಪುತ್ತೂರು ತಾಲ್ಲೂಕು :ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು ಸರ್ವೋದಯ ಪ್ರೌಢಶಾಲೆ
ಪೆರಿಯಡ್ಕ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 23/8/24 ರಂದು ಸರ್ವೋದಯ ಪ್ರೌಢಶಾಲೆ ಪೆರಿಯಡ್ಕದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪರಿವೀಕ್ಷಕರಾದ ಬಾಲಕೃಷ್ಣ ಬಿ ಟಿ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು

 

ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀ ಮತಿ ಲಕ್ಷ್ಮೀ ಪಿ ವಹಿಸಿ ಶುಭಹಾರೈಸಿದರು.
ಉಪ್ಪಿನಂಗಡಿ ವಲಯದ ಜನಜಾಗೃತಿ ವೇದಿಕೆ ವಲಯಧ್ಯಕ್ಷರಾದ ಶ್ರೀ ಲೋಕೇಶ್ ಬೆತ್ತೋಡಿ ರವರು ಮಾತನಾಡುತ್ತಾ ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕಾದರೆ ಯುವ ಜನತೆಯ ಪಾತ್ರ ಬಹಳ ಮುಖ್ಯ ಹದಿ ಹರೆಯದಲ್ಲಿ ದಾರಿ ತಪ್ಪುವ ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತರಾಗಬೇಕು ಸಪ್ತ ವ್ಯಸನಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಿ ವ್ಯಸನ ಮುಕ್ತ ಜೀವನ ನಡೆಸಿ ಎಂದು ತರಬೇತಿ ಕಾರ್ಯಕ್ರಮದಲ್ಲಿ ಕರೆ ಕೊಟ್ಟರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಪುತ್ತೂರು ಯೋಜನಾಧಿಕಾರಿಗಳಾದ ಶ್ರೀ ಶಶಿಧರ್ ಎಂ ಮಾತನಾಡಿ ಯೋಜನೆ ಮುಖಾಂತರ ಹತ್ತಾರು ಕಾರ್ಯಕ್ರಮಗಳು ನಡೆಯುತ್ತಿದ್ದು ಸ್ವಾಸ್ತ್ಯ ಸಂಕಲ್ಪದ ಮೂಲಕ ಮಕ್ಕಳಲ್ಲಿ ಅರಿವನ್ನು ಮೂಡಿಸಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಾಜಿ ವಲಯ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಪೆರಿಯಡ್ಕ ಒಕ್ಕೂಟದ ಅ ಧ್ಯಕ್ಷರಾದ ಶ್ರೀ ಶೇಖರ ಪಂಚೇರು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೀನಪ್ಪ ಗೌಡ ಬೊಳ್ಳ ವು
ವಲಯದ ಮೇಲ್ವಿಚಾರಕರಾದ ಶ್ರೀ ಶಿವಪ್ಪ ಎಂ. ಕೆ ಸೇವಾಪ್ರತಿನಿಧಿಗಳಾದ ಶ್ರೀಮತಿ ಮಮತ, ಶ್ರೀಮತಿ ಬೇಬಿ, & ಶ್ರೀಮತಿ ಶಶಿ, ಚಂದ್ರಿಕಾ ಉಪಸ್ಥಿತರಿದ್ದರು.

ಶಿಕ್ಷಕ ವೃಂದ &ಶಾಲೆಯ ಮಕ್ಕಳು ಮಾಹಿತಿ ಪಡಕೊಂಡರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement