Published
4 months agoon
By
Akkare Newsಪುತ್ತೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳ್ಳತನ ನಡೆಸಿದ ಘಟನೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ಆ.23ರಂದು ರಾತ್ರಿ ನಡೆದಿದೆ.
ಕಾಡಬಾಗಿಲು ನಿವಾಸಿ ಸಾರಮ್ಮ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಸಾರಮ್ಮ ಅವರು ತನ್ನ ಸೊಸೆ ಜೊತೆ ಆ.24ರಂದು ಅನಾರೋಗ್ಯದಲ್ಲಿದ್ದ ಮೊಮ್ಮಗನನ್ನು ಔಷಧಿಗೆಂದು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಅವರು ಸಂಬಂಧಿಕರ ಮನೆಗೆ ಹೋಗಿ ಅಲ್ಲಿ ಉಳಿದುಕೊಂಡಿದ್ದರು. ಆ.24ರಂದು ಬೆಳಿಗ್ಗೆ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಬಾಗಿಲನ್ನು ಮುರಿಯಲು ಯತ್ನಿಸಿದ ಕಳ್ಳರು ಅದು ಸಾಧ್ಯ ಆಗದೇ ಇದ್ದಾಗ ಕಿಟಕಿಯ ಸರಳನ್ನು ಯಾವುದೋ ಸಾಧನದಿಂದ ಮೀಟಿ ಒಳನುಗ್ಗಿದ ಕಳ್ಳರು ಮನೆಯೊಳಗೆ ಕಪಾಟಿನಲ್ಲಿದ್ದ 3 ಪವನ್ ಚಿನ್ನ, 35 ಸಾವಿರ ನಗದು ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ಮನೆಯ ಎರಡು ಕಿಟಕಿಯನ್ನು ಮುರಿಯಲಾಗಿದೆ. ಸಾರಮ್ಮ ಅವರ ಪುತ್ರ ಇಮ್ರಾನ್ ಅವರು ವಿದೇಶದಲ್ಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆಸಿರುವುದರಿಂದ ಮನೆಯ ಬಗ್ಗೆ ಮಾಹಿತಿ ಗೊತ್ತಿರುವವರೇ ಶಾಮಿಲಾಗಿರಬಹುದೇ ಎನ್ನುವ ಸಂಶಯ ಉಂಟಾಗಿದೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಕ್ರೈಂ ಎಸ್ ಐ ಸುಶ್ಮಾ ಜಿ.ಬಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ