Published
4 months agoon
By
Akkare Newsರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣದಿಂದ ಸಾಕಷ್ಟು ಬಡ ಮಹಿಳೆಯರ ಬದುಕು ಬದಲಾಗಿದೆ. ಈ ಹಣದಿಂದ ಹಲವರು ಚಿನ್ನ, ಸೀರೆ, ಮನೆ ಸಾಮಾಗ್ರಿಗಳನ್ನ ಕೊಂಡುಕೊಂಡಿದ್ದರೆ, ಇನ್ನೂ ಕೆಲವರು ಅದರಿಂದ ಬದುಕು ಕಟ್ಟಿಕೊಳ್ತಿದ್ದಾರೆ. ಆದರೆ ಇಲ್ಲೊಬ್ಬ ವೃದ್ದೆ ಅಕ್ಕಾತಾಯಿ ಲಂಗೋಟಿ ಎಂಬುವವರು ಬಂದ ಹಣ ಕೂಡಿಟ್ಟು ಇಡೀ ಊರಿಗೆ ಊಟ ಹಾಕಿಸಿದ್ದಾಳೆ.
ಈ ಹಿನ್ನಲೆ ಖುದ್ದು ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿ ಮಾತನಾಡಿದ್ದಾರೆ.
ಬೆಳಗಾವಿ, ಆ.25: ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆಯಾದ ಅಕ್ಕಾತಾಯಿ ಲಂಗೋಟಿ ಅವರು ತನ್ನ ಹತ್ತು ಕಂತಿನ ಗೃಹಲಕ್ಷ್ಮಿ ಹಣವನ್ನ ಕೂಡಿಟ್ಟು ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಈ ಕುರಿತು ಟಿವಿ9 ವರದಿ ಬೆನ್ನಲ್ಲೇ ವೃದ್ಧೆ ಅಕ್ಕಾತಾಯಿ ಲಂಗೋಟಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿ ಮಾತನಾಡಿದ್ದಾರೆ. ‘ನಿಮ್ಮ ಕಾರ್ಯ ನೋಡಿ ಬಹಳಷ್ಟು ಖುಷಿಯಾಗಿದೆ.
ಗೃಹಲಕ್ಷ್ಮಿ ಯೋಜನೆ ನಿಮ್ಮಂಥವರಿಗೆ ಕೊಟ್ಟು ಸಾರ್ಥಕ ಆಯ್ತು. ಆ ವಿಡಿಯೋ ಸಿದ್ದರಾಮಯ್ಯ ಸಾಹೇಬರಿಗೂ ತೋರಿಸುತ್ತೇನೆ ಎಂದಿದ್ದಾರೆ.
ವೃದ್ಧೆಗೆ ಶಾಲು ಹೋದಿಸಿ ಸನ್ಮಾನ ಮಾಡಿ ರೇಷ್ಮೆ ಸೀರೆ ಕಾಣಿಕೆ ಇನ್ನು ಊರಿಗೆ ಹೋಳಿಗೆ ಊಟ ಹಾಕಿಸಿದೆ.
ನಿನ್ನ ಮಗಳಿಗೆ(ಲಕ್ಷ್ಮೀ ಹೆಬ್ಬಾಳ್ಕರ್) ಕರಿಲಿಲ್ಲ ಎಂದು ಹೇಳುತ್ತಾ ಹೆಬ್ಬಾಳ್ಕರ್ ಖುಷಿ ವ್ಯಕ್ತಪಡಿಸಿದರು. ‘ ಜೊತೆಗೆ ನೀವು ನಮ್ಮನೆ ಊಟಕ್ಕೆ ಬನ್ನಿ ಎಂದು ವೃದ್ಧೆಯನ್ನು ಆಹ್ವಾನಿಸಿದರು. ಇದೇ ವೇಳೆ ನಿನಗೆ ಒಂದು ಸೀರೆ ಕೊಟ್ಟು ಕಳ್ಸಿದ್ದೇನೆ. ನೀನು ಊರಿಗೆ ಊಟ ಹಾಕಿದಿ, ನಿನ್ನ ಮಗಳು ನೀನಗೆ ರೇಷ್ಮೆ ಸೀರೆ ಉಡಿಸುತ್ತಾಳೆ. ಗೃಹಲಕ್ಷ್ಮಿ ಯೋಜನೆಯಿಂದ ಇಡೀ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ ಎಂದರು.
ಈ ವೇಳೆ ‘ನಮ್ಮ ಆಶೀರ್ವಾದ ಸಿದ್ದರಾಮಯ್ಯ ಸಾಹೇಬರ ಮೇಲಿರುತ್ತೆ ಎಂದ ವೃದ್ಧೆ ಹೇಳಿದರು. ಜೊತೆಗೆ ನನಗೆ ಹೆಣ್ಣು ಮಕ್ಕಳಿಲ್ಲ, ನೀವೇ ನಮ್ಮ ಮಗಳು ಎಂದು ಹೆಬ್ಬಾಳ್ಕರ್ಗೆ ವೃದ್ದೆ ಹೇಳಿದರು. ಬಳಿಕ ತಮ್ಮ ಪಿಎ ಅವರನ್ನ ವೃದ್ದೆ ಮನಗೆ ಕಳುಹಿಸಿ ಕೊಟ್ಟ ಹೆಬ್ಬಾಳ್ಕರ್, ವೃದ್ಧೆಗೆ ಶಾಲು ಹೋದಿಸಿ ಸನ್ಮಾನ ಮಾಡಿ ರೇಷ್ಮೆ ಸೀರೆ ಕಾಣಿಕೆಕೊಟ್ಟು, ನಿಮ್ಮ ಮಗಳು ಕೊಟ್ಟಿದ್ದಾಳೆ ಎಂದರು.
ಒಂದು ಕಡೆ ಗ್ಯಾರಂಟಿ ಯೋಜನೆ ನಿಲ್ಲಿಸಿ ಎಂದು ಸಾಕಷ್ಟು ಜನ ಮಾತಾಡುತ್ತಿದ್ದರೂ, ಇನ್ನೊಂದು ಕಡೆ ಬಡ ಜನರಿಗೆ ವೃದ್ದೆಯರಿಗೆ ಇದೇ ಹಣ ಸಾಕಷ್ಟು ಅನುಕೂಲ ಆಗಿದೆ. ಅದರಲ್ಲೂ ಅಕ್ಕತಾಯಿಯಂತ ವೃದ್ದೆ ಸರ್ಕಾರದ ಯೋಜನೆ ನಿಲ್ಲಬಾರದು ಎಂದು ಹರಕೆ ಕಟ್ಟಿಕೊಂಡು ಸಿಎಂ ಸಿದ್ದರಾಮಯ್ಯಗೆ ಒಳ್ಳೆಯದಾಗಿ ಎಂದು ಊಟ ಹಾಕಿಸಿದ್ದು, ಸರ್ಕಾರದ ಯೋಜನೆ ಸಾರ್ಥಕತೆ ತೋರಿಸುತ್ತಿದೆ. ಈ ಯೋಜನೆ ಅದೆಷ್ಟೋ ಬಡ ಹೆಣ್ಣು ಮಕ್ಕಳಿಗೆ ಬದುಕು ಕೊಡ್ತಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.