ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನಾಗರಹೊಳೆ ಉದ್ಯಾನದಂಚಿನಲ್ಲಿ ಜಿಂಕೆ ಭೇಟೆ ಓರ್ವನ ಬಂಧನ. ಇಬ್ಬರು ಪರಾರಿ

Published

on

ಮಾಂಸ, ಬೈಕ್, ಮೊಬೈಲ್ ವಶ.
ನಾಗರ ಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ಪ್ರಾದೇಶಿಕ ಅರಣ್ಯದಲ್ಲಿ ಜಿಂಕೆ ಭೇಟೆಯಾಡಿ ಮಾಂಸ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ಕಿರಂಗೂರು ಗೇಟ್ ಬಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರೆ, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

 

ಉದ್ಯಾನದಂಚಿನ ಹನಗೋಡು ಹೋಬಳಿಯ ಭರತವಾಡಿ ಹಾಡಿಯ ರುದ್ರನನ್ನು ಬಂಧಿತ ಆರೋಪಿ, ಈತನಿಂದ ಎರಡು ಕೆ.ಜಿಯಷ್ಟು ಜಿಂಕೆ ಮಾಂಸ, ಜಿಂಕೆ ರ್ಮಪಪ, ಕೃತ್ಯಕ್ಕೆ ಬಳಸಿದ್ದ ಬೈಕ್, ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಕಪ್ಪನಕಟ್ಟೆ ಹಾಡಿಯ ರಾಮು ಹಾಗೂ ಅವ್ವು ತಲೆ ಮರೆಸಿಕೊಂಡಿದ್ದಾರೆ.

 

ಆರೋಪಿಗಳು ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಣಸೂರು ವನ್ಯಜೀವಿ ವಿಭಾಗದ ಆರ್.ಎಫ್.ಓ.ಸುಬ್ರಮಣ್ಯ ಕೆ.ಇ, ಆನೆಚೌಕೂರು ವಲಯದ ಡಿಆರ್ಎಫ್ಓ ಶಿವಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಹನಗೋಡಿಗೆ ಸಮೀಪದ ಕಿರಂಗೂರು ಗೇಟ್ ಬಳಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಉಳಿದಿಬ್ಬರು ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement