ದಕ್ಷಿಣಕನ್ನಡ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಜಿಲ್ಲಾ ಸದಸ್ಯರು ಹಾಗೂ ಮೇನಾಲ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೌಕತ್ ಆಲಿ ಮೇನಾಲ ಶಾಲೆಯ ಕುಂದು ಕೊರತೆಗಳ ಬಗ್ಗೆ ಎಸ್.ಡಿ.ಎಂ.ಸಿ ಜೊತೆ ಚರ್ಚಿಸಿ ಅಲ್ಲಿನ ಮಕ್ಕಳ ಜೊತೆ ಮಧ್ನಾಹ್ನ ದ ಊಟವನ್ನು ಮಕ್ಕಳ ಜೊತೆ ಸವಿದರು.
ಮಕ್ಕಳ ಪ್ರೀತಿಯ ಅಡುಗೆ ಸಿಬ್ಬಂದಿಗಳ ಜೊತೆ ಮಾತಾಡಿ ಮೆಚ್ಚುಗೆ ವ್ಯಕ್ತ ಪಡಿಸಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಡುಗೆ ವ್ಯವಸ್ಥೆ ಹಾಗೂ ಸರ್ಕಾರದಿಂದ ಮಕ್ಕಳಿಗೆ ಬಿಸಿ ಊಟ ಪೌಷ್ಠಿಕ ಆಹಾರದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು*