ಮಂಗಳೂರು ಬೆಂಗಳೂರು ರಾಜ್ಯ ರಸ್ತೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಸುಗಮ ಬಸ್ಸಿನಲ್ಲಿ ವಿದ್ಯಾರ್ಥಿಯ ಮೊಬೈಲ್ ಫೋನ್ ಬಸ್ಸಿನಿಂದ ಬಿದ್ದು ರಸ್ತೆಯಲ್ಲಿ ಇರುವುದನ್ನು ಕಂಡು ಅದೇ ರಸ್ತೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಚಾಲಕರಾದ ಜಯಾನಂದ ನವರು ನೋಡಿ ಮೊಬೈಲ್ ತೆಗೆದು ತನ್ನ ವಾಹನವನ್ನು ಮಂಗಳೂರು ಕಡೆ ತಿರುಗಿಸಿ ಬಸ್ಸನ್ನು ನಿಲ್ಲಿಸಿ ವಿದ್ಯಾರ್ಥಿಗೆ ಮೊಬೈಲ್ ಫೋನನ್ನು ಹಿಂದಿರುಗಿಸಿದ್ದಾರೆ.
ಬಸ್ಸಿನ ಪ್ರಯಾಣಿಕರು ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿ ಜಯಾನಂದರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.