ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಸೌಜನ್ಯ ಪ್ರಕರಣ ತೀರ್ಪು ಪ್ರಕಟಿಸಿದ ಹೈ ಕೋರ್ಟ್: ತೀರ್ಪಿನಲ್ಲಿ ಏನಿದೆ ಇಲ್ಲಿದೆ ಫುಲ್ ಡೀಟೇಲ್ಸ್ 👇

Published

on

 ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಅರ್ಜಿಗಳ ತೀರ್ಪು ಪ್ರಕಟವಾಗಿದೆ. ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಮಾಡಲಾಗಿತ್ತು. ಪ್ರಕರಣದ ಮರುತನಿಖೆ ಕೋರಿ ಸೌಜನ್ಯ ಪೋಷಕರು ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಆರೋಪಿ ಸಂತೋಷ್ ರಾವ್ ಅಕ್ರಮ ಬಂಧನಕ್ಕೆ ಪರಿಹಾರ ಕೋರಿದ್ದ ಅರ್ಜಿ ಕೂಡಾ ವಜಾ ಆಗಿದೆ.

 

ಮೂರೂ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು ಹೈಕೋರ್ಟ್. ಇದು ಹೈಕೋರ್ಟ್ ವಿಭಾಗೀಯ ಪೀಠದಿಂದ ಇಂದು ತೀರ್ಪು ಪ್ರಕಟವಾಗಿದೆ. ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರ ಪೀಠದಿಂದ ಆದೇಶ ಬಂದಿದ್ದು ಮೂರು ಅರ್ಜಿಗಳನ್ನು ವಜಾಗೊಳಿಸಿದೆ ಹೈಕೋರ್ಟ್.

ಮುಖ್ಯಾಂಶಗಳು:
ಮರು ತನಿಖೆ ಕೋರಿ ಸೌಜನ್ಯ ಪೋಷಕರು ಸಲ್ಲಿಸಿದ್ದ ಅರ್ಜಿ.
ಪರಿಹಾರ ಕೋರಿ ಸಂತೋಷ್ ರಾವ್ ಸಲ್ಲಿಸಿದ್ದ ಅರ್ಜಿ ವಜಾ.
ಸಂತೋಷ್ ರಾವ್ ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶ ಎತ್ತಿ ಹಿಡಿದ ಹೈಕೋರ್ಟ್.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನೇಕ ಹೇಯ ಕೃತ್ಯಗಳ ಬಗ್ಗೆ, ಅದಕ್ಕೆ ಕಾರಣವಾಗಿರುವ ಎನ್ನಲಾಗಿರುವ ಧಣಿಗಳ ಮತ್ತು ಅವರ ಪರಿವಾರದ ವಿರುದ್ಧ ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಇವೆ. ಸೌಜನ್ಯ ಗೌಡ ಕೊಲೆಯಾಗಿ 12 ವರ್ಷ ಆದರೂ ಇಂದು ನ್ಯಾಯ ಸಿಕ್ಕಿಲ್ಲ. ಈ ಹಿಂದೆ ನಡೆದ ತನಿಖೆಗಳಲ್ಲಿ ಸೌಜನ್ಯಗಳಿಗೆ ಸರ್ಕಾರದ ಅಂಗ ಸಂಸ್ಥೆಗಳೇ ಅನ್ಯಾಯ ಮಾಡಿದ್ದವು. ಹೀಗಾಗಿ ಸೌಜನ್ಯ ಮರುತನಿಗೆ ಮಾಡಬೇಕು ಎನ್ನುವ ಹಕ್ಕೋತ್ತಾಯ ಜನರಿಂದ ಮೂಡಿಬಂದಿತ್ತು. ಈ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಲು ಆಗುವುದಿಲ್ಲ ಎಂದು ಹೇಳಿದೆ ಹೈಕೋರ್ಟ್. ಈ ಮೂಲಕ ಸೌಜನ್ಯಾ ಪೋಷಕರು ಸಲ್ಲಿಸಿದ ಅರ್ಜಿ ವಜಾ ಆಗಿದೆ.

 

ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಪೊಲೀಸರುಗಳು ವೈದ್ಯರುಗಳು ರಾಜಕಾರಣಿಗಳು ಮತ್ತು ಇಡೀ ವ್ಯವಸ್ಥೆ ತನಿಖೆ ಆಗದಂತೆ ನೋಡಿಕೊಂಡಿತ್ತು. ಎಲ್ಲರೂ ಸೇರಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಿದ್ದರು.  ಹಾಗಾಗಿ ಕಳೆದ 12 ವರ್ಷಗಳಿಂದಲೂ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಲು ಸೌಜನ್ಯ ತಾಯಿ ಕುಸುಮಾವತಿ ಗಟ್ಟಿಯಾಗಿ ನಿಂತಿದ್ದಾರೆ. ಸೌಜನ್ಯ ಪ್ರಕರಣದ ಪ್ರಾರಂಭದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ, ಸಂತಸ್ಥ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಕಾಲದಿಂದ ಕಾಲಕ್ಕೆ ಹೊಸ ಹೊಸ ಹೋರಾಟಗಾರರು ಸೌಜನ್ಯ ಪರ ಹೋರಾಟದ ಉದ್ದೇಶಕ್ಕೆ ಬಲ ತುಂಬಿದ್ದು, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಈ ಪೈಕಿ ಪ್ರಮುಖ ಹೆಸರು. ಇವರೆಲ್ಲರ ಪ್ರಯತ್ನದ ಫಲವಾಗಿ ಸೌಜನ್ಯ ಪ್ರಕರಣ ಮರು ತನಿಖೆಗೆ ಹೋಗಬೇಕು ಎಂದು ಕೋರ್ಟ್ ಮೆಟ್ಟಲು ಹತ್ತಿದ್ದರು. ಆದರೆ ಕೋರ್ಟ್ ಇದೀಗ ಸೌಜನ್ಯ ಹೋರಾಟಗಾರರಿಗೆ ತುಸು ನಿರಾಸೆ ಮೂಡಿಸಿದೆ.

 

ಧರ್ಮಸ್ಥಳದಲ್ಲಿ ಒಟ್ಟು 428 ಅಸಹಜ ಕೊಲೆಗಳು ಸಂಭವಿಸಿವೆ ಅನ್ನೋದು ಒಂದು ಅಂದಾಜು. ಅವುಗಳಲ್ಲೇ ನೂರಕ್ಕೆ ತೊಂಬತ್ತೊಂಬತ್ತರಷ್ಟು ಬೆಳಕಿಗೆ ಬರಲೇ ಇಲ್ಲ. ಮೊದಲಿಗೆ ಟೀಚರ್ ವೇದವಲ್ಲಿ ಕೊಲೆ, ನಂತರ SDM ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ಹತ್ಯೆ ನಡೆದಿತ್ತು. ಇವ್ಯಾವುದರಲ್ಲೂ ಆರೋಪಿಗಳಿಗೆ ಶಿಕ್ಷೆ ಆಗಲೇ ಇಲ್ಲ. ನಂತರ ಸೌಜನ್ಯಾ ಸಾವಿಗೆ ಕೇವಲ 11 ದಿನಗಳ ಹಿಂದೆ ಆನೆ ಧರ್ಮಸ್ಥಳದ ದೇವಸ್ಥಾನದ ಸಾಕು ಆನೆ ಮಾವುತನ ಕುಟುಂಬದ ಜೋಡಿ ಕೊಲೆ ನಡೆದಿತ್ತು. ಆನೆ ಮಾವುತನನ್ನು ಆತನ ಹೆಂಡತಿಯ ಸಮೇತ ಕಲ್ಲು ಎತ್ತಿ ಹಾಕಿ ಜಜ್ಜಿ ಕೊಲೆ ಮಾಡಲಾಗಿತ್ತು. ಆಗ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯ ಕುಟುಂಬಸ್ಥರ ಮೇಲೆ ಆರೋಪ ಕೇಳಿಬಂದಿತ್ತು. ಆ ಕೊಲೆಯಲ್ಲೂ ಕೂಡಾ ಯಾವುದೇ ರೀತಿಯ ತನಿಖೆ ನಡೆಯಲಿಲ್ಲ.
ಸೌಜನ್ಯ ಪ್ರಕರಣದ ಜೊತೆಗೆ ಆನೆ ಮಾವುತನ ಕುಟುಂಬದ ಹತ್ಯೆಯ ಪ್ರಕರಣ ಕೂಡ ತನಿಖೆಗೆ ಬರಲಿ ಎಂಬುದು ಸೌಜನ್ಯ ಪರ ಹೋರಾಟಗಾರರ ಆಶಯವಾಗಿತ್ತು. ಆದರೆ ಈಗ ಕೋರ್ಟು ಮರುತನಿಖೆ ಇಲ್ಲ ಅಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement