ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕಾರ್ಯಕ್ರಮಗಳು

ಪುಣ್ಣಪ್ಪಾಡಿ :1843ನೇ ಮದ್ಯವರ್ಜನಾ ಶಿಬಿರದ ಸಮಾರೋಪ 77 ಶಿಬಿರಾರ್ಥಿಗಳ ನವಜೀವನಕ್ಕೆ ಮುನ್ನುಡಿಯಾದ ಶಿಬಿರ

Published

on

 

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ವಿನಾಯಕನಗರ, ಪುಪ್ಪಾಡಿ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ (ರಿ.), ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಡಬ ತಾಲೂಕು ಶ್ರೀ ಗೌರಿ ಗಣೇಶ ಸೇವಾ ಟ್ರಸ್ಟ್ (ರಿ), ವಿನಾಯಕನಗರ, ಪುಪ್ಪಾಡಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಗ್ರಾಮ ಪಂಚಾಯತ್ ಸವಣೂರು, ಪ್ರಗತಿಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟಗಳು, ನವಜೀವನ ಸಮಿತಿ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ, ಉಜಿರೆ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಆ.22 ರಿಂದ ಆ.29ರವರೆಗೆ ಪುಪ್ಪಾಡಿ ನೇರೋಳಡ್ಕ ವಿನಾಯಕ ನಗರ ಶ್ರೀ ಗೌರಿ ಸದನ ಸಭಾಂಗಣದಲ್ಲಿ ನಡೆದ 1843 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಆ.29ರಂದು ನಡಯಿತು.
 ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕರಾದ ಮಹೇಶ್ ಕಜೆ ಮಾತನಾಡಿ, ಒಂದು ದೇಶಕ್ಕೆ ಆಂತರಿಕ ಶತ್ರುಗಳು ಎಷ್ಟು ಅಪಾಯವೋ ಅಷ್ಟೇ ಅಪಾಯಕಾರಿಯಾಗಿರುವುದು ವ್ಯಕ್ತಿಗೆ ತನ್ನೊಳಗಿನ ಮದ್ಯ ವ್ಯಸನ.ಇಂತಹ ವ್ಯಸನದ ವಿರುದ್ಧ ಶಿಬಿರದ ಮೂಲಕ ಹೋರಾಟ ಮಾಡುವ ಶಿಬಿರಾರ್ಥಿಗಳು ಕೂಡ ಯೋಧರಂತೆ.ಒಬ್ಬ ವ್ಯಕ್ತಿಯ ಕುಡಿತ ಒಂದು ಕುಟುಂಬವನ್ನು ಪಡೆದರೆ ಅದೇ ಕುಡಿತದ ಚಟ ಬಿಟ್ಟಾಗ ಕುಟುಂಬವನ್ನು ಬೆಸೆಯುತ್ತದೆ ಎಂದರು.

 

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಮದ್ಯವರ್ಜನಾ ಶಿಬಿರದ ಆಯೋಜನೆ ಎಂದರೆ ಅದೊಂದು ಭಿನ್ನ ವ್ಯವಸ್ಥೆ. ಒಬ್ಬ ವ್ಯಕ್ತಿಯ ಹೊಸ ಜೀವನ ರೂಪಿಸುವ ಪುಣ್ಯಕಾರ್ಯ.ಇಂತಹ ವ್ಯವಸ್ಥೆಯೊಳಗೆ ಕಾರ್ಯಕರ್ತರಾಗಿರುವುದಕ್ಕೆ ನಮಗೆ ಹೆಮ್ಮಿಯಿದೆ ಎಂದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಾಜಿ ನಿರ್ದೇಶಕ ಭಾಸ್ಕರ ಕೋಡಿಂಬಾಳ ಮಾತನಾಡಿ, ಮದ್ಯವರ್ಜನಾ ಶಿಬಿರದ ಶಿಬಿರಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಿದೆ.ನಿಮ್ಮ ಮೇಲೆ ಎಲ್ಲರೂ ನಂಬಿಕೆಯಿರಿಸಿದ್ದಾರೆ ಆ ನಂಬಿಕೆ ಉಳಿಸಿಕೊಳ್ಳುವ ಮಹತ್ವದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ, ಇಲ್ಲಿಯವರೆಗೆ ಶಿಬಿರಾರ್ಥಿಗಳು ಒಂದು ವ್ಯವಸ್ಥೆಯೊಳಗಿದ್ದರು.ಈ ವ್ಯವಸ್ಥೆಯಿಂದ ಹೊರ ಹೋಗುವಾಗ ಕೆಲವೊಂದು ಒತ್ತಡಗಳು ಸಹಜವಾಗಿ ಬರುತ್ತದೆ. ಒತ್ತಡಗಳ ನಿವಾರಣೆಗೆ ಧ್ಯಾನ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು.

 

ಅಧ್ಯಕ್ಷತೆ ವಹಿಸಿದ್ದ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸಚಿನ್‌ ಕುಮಾರ್ ಜೈನ್‌ ಮಾತನಾಡಿ,ಮದ್ಯವರ್ಜನಾ ಶಿಬಿರವೆಂದರೆ ಅದೊಂದು ಮನಕರಗುವ ಶಿಬಿರ. ಇಲ್ಲಿ ಎಲ್ಲರ ಪ್ರೀತಿದೊರಕಿದೆ.ಶಿಬಿರದ ಆಯೋಜನೆ ಮೂಲಕ ಪುಪ್ಪಾಡಿಯ ಹೆಸರು ಹತ್ತೂರಿನಲ್ಲೂ ಪಸರಿಸುವಂತಾಗಿದೆ. ಕಡಬ ತಾಲೂಕು ಜನಜಾಗೃತಿ ವೇದಿಕೆಯ ಪ್ರಥಮ ಅಧ್ಯಕ್ಷರಾದ ಮಹೇಶ್ ಕೆ.ಸವಣೂರು ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳಾಗುತ್ತಿವೆ.ರಾಜ್ಯದಲ್ಲಿ ಕಡಬ ತಾಲೂಕು ಘಟಕ ಮೊದಲ ಸ್ಥಾನದಲ್ಲಿ ಗುರುತಿಸುವಂತಾಗಲಿ.ಶಿಬಿರದ ಪ್ರಯೋಜನ ಪಡೆದುಕೊಂಡವರು ಜೀವನದಲ್ಲಿ ಯಶಸ್ವಿಯಾಗಬೇಕು.ಸಮಾಜವು ಋಣಾತ್ಮಕ ಗುಣಗಳನ್ನು ಗುರುತಿಸುವ ಬದಲು ಸಕಾರತ್ಮ ಗುಣಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋ.ಯ ದ.ಕ.ಜಿಲ್ಲಾ ನಿರ್ದೇಶಕ ಪ್ರವೀಣ್‌ ಕುಮಾರ್, ಜನಜಾಗೃತಿ ವೇದಿಕೆಯ ಕಡಬ ತಾಲೂಕು ಉಪಾಧ್ಯಕ್ಷ ಸೀತಾರಾಮ ಗೌಡ ಪೊಸವೊಳಿಕೆ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ,ಶಿಬಿರಾಧಿಕಾರಿ ದೇವಿಪ್ರಸಾದ್‌ ಸುವರ್ಣ,ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್,ಗೋಳಿತೊಟ್ಟು ವಲಯಾಧ್ಯಕ್ಷ ನೋಣಯ್ಯ ಪೂಜಾರಿ, ಶಿಬಿರದ ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಚೇತನ್ ಕುಮಾ‌ರ್ ಕೋಡಿಬೈಲು,
ಗ್ರಾಮಾಭಿವೃದ್ದಿ ಯೋಜನೆಯ ಪುಪ್ಪಾಡಿ ಒಕ್ಕೂಟದ ಅಧ್ಯಕ್ಷ ವಿಜಯ ಗೌಡ ಕುಚ್ಚೆಜಾಲು,ಶಿಬಿರದ ಆರೋಗ್ಯ ಸಹಾಯಕಿ ನೇತ್ರಾವತಿ ಮೊದಲಾದವರಿದ್ದರು.

77 ಮಂದಿ ಶಿಬಿರಾರ್ಥಿಗಳು 8 ದಿನಗಳ ಶಿಬಿರದಲ್ಲಿ ಭಾಗವಹಿಸಿದರು.ಬೆಳಿಗ್ಗೆ ಕುಟುಂಬ ದಿನ ನಡೆಯಿತು.
ಪುಟ್ಟಪ್ಪಾಡಿಯಲ್ಲಿ ನವಜೀವನ ಸಮಿತಿಯ ತಾಲೂಕು ಸಮಾವೇಶ-ಸಚಿನ್‌ ಕುಮಾ‌ರ್ ಜೈನ್
ಮದ್ಯವರ್ಜನಾ ಶಿಬಿರದ ಮೂಲಕ ವ್ಯಸನಮುಕ್ತರಾಗಿರುವ ಎಲ್ಲರನ್ನೂ ಸೇರಿಸಿಕೊಂಡು ಕಡಬ ತಾಲೂಕು ಮಟ್ಟದ ನವಜೀವನ ಸಮಿತಿ ಸಮಾವೇಶವನ್ನು ಪುಟ್ಟಪ್ಪಾಡಿಯಲ್ಲಿ ಆಯೋಜನೆ ಮಾಡೋಣ. ಆ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಲಾಗುವುದು ಎಂದು ಸಚಿನ್‌ ಕುಮಾರ್ ಜೈನ್‌ ಹೇಳಿದರು.
ಹುಟ್ಟು ಹಬ್ಬ ಆಚರಣೆ
ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸಚಿನ್‌ ಕುಮಾರ್ ಜೈನ್ ಅವರ ಹುಟ್ಟು ಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಎಲ್ಲಾ ಗಣ್ಯರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಚಿನ್‌ ಕುಮಾ‌ರ್ ಅವರ ಹೆತ್ತವರಾದ ಮಲ್ಲಿಕಾ ಯುವರಾಜ ಕಡಂಬ ಉಪಸ್ಥಿತರಿದ್ದರು.

ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಶಿಬಿರದ ಯೋಗ ಶಿಕ್ಷಕ ಜಯಂತ ವೈ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಸನ್ಮಾನ
ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ,ಅಧ್ಯಕ್ಷರಾದ ಸಚಿನ್ ಕುಮಾರ್ ಜೈನ್, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು-ಪೂರ್ಣಿಮಾ ಮಹೇಶ್‌ ಅವರನ್ನು ಸನ್ಮಾನಿಸಲಾಯಿತು.
ಶಿಬಿರದ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಸತೀಶ್‌ ಬಲ್ಯಾಯ, ಗಣೇಶ್ ಉದನಡ್ಕ, ಹರೀಶ್ ತೋಟದಡ್ಕ ಕುಸುಮಾಧರ ಸಾಲಿಯಾನ್ ಚಾರ್ವಾಕ, ಜನಾರ್ದನ ನೂಜಾಜೆ, ಶಿಬಿರದ ಗೌರವ ಸಲಹೆಗಾರರಾದ ಸತೀಶ್ ಪೂಜಾರಿ ನೇರೋಳಡ್ಕ, ತಾರಾನಾಥ ಕಾಯರ್ಗ, ಯಶೋಧಾ ನೂಜಾಜೆ, ಸಂಪತ್ ಕುಮಾರ್ ಇಂದ್ರ,ಲಿಂಗಪ್ಪ ರೈ ಚೆಂಬುತ್ತೋಡಿ, ನಾರಾಯಣ ಗೌಡ ಪೂವ, ಜತೆ ಕಾರ್ಯದರ್ಶಿ ಯೋಜನೆಯ ವಲಯ ಮೇಲ್ವಿಚಾರಕಿ ವೀಣಾ ಕೆ.,ಸೇವಾ ಪ್ರತಿನಿಧಿಗಳಾದ ಸುಜಿತ್, ಅಮಿತಾ,ಆನಂದ ಕುಕ್ಕುಜಡ್ಕರವಿ ಕಾಸರಗೋಡು ಅತಿಥಿಗಳನ್ನು ಗೌರವಿಸಿದರು.
ಸೇವಾಪ್ರತಿನಿಧಿಗಳು ಪ್ರಾರ್ಥಿಸಿದರು. ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿದರು.ಶಿಬಿರದ ಕಾರ್ಯದರ್ಶಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ವಂದಿಸಿದರು. ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement