ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕಾರ್ಯಕ್ರಮಗಳು

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಪುತ್ತೂರಿನಲ್ಲಿ ವೈಭವದ ಶೋಭಾಯಾತ್ರೆ. ರೋಮಾಂಚಕ ಗೊಲ್ಲುವ ಹಟ್ಟಿ ಮಡಿಕೆ ಓಡೆಯುವ ಸಾಹಸ ಪ್ರದರ್ಶನ

Published

on

ಪುತ್ತೂರು: ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ವೈಭವದ ಶೋಭಾಯಾತ್ರೆ ಶನಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

 

ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ವೈಭವದ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ಮಂಗಳೂರು ಪ್ರಸಾರ ಪ್ರಚಾರ ಪ್ರಮುಖ್‍ಪ್ರದೀಪ್‍ಸರಿಪಲ್ಲ ಧ್ವಜ ಹಸ್ತಾಂತರ ಮಾಡಿದರು.

ಬಳಿಕ ವೈಭವದ ಶೋಭಾಯಾತ್ರೆ ಶ್ರೀಕೃಷ್ಣನ ಸುಂದರ ರಥದೊಂದಿಗೆ, ವಿಟ್ಲ ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯವರಿಂದ ಆಕರ್ಷಕ ತಾಲೀಮು, ಕೀಲು ಕುದುರೆ, ನಾಸಿಕ್ ಬ್ಯಾಂಡ್ ಒಳಗೊಂಡು ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಯ್ದ ಪ್ರದೇಶದಲ್ಲಿ ಹಾಕಲಾದ ಅಟ್ಟಿ ಮಡಿಕೆ ಒಡೆಯುವ ಮೂಲಕ ಸಾಹಸ ಪ್ರದರ್ಶನವನ್ನು ತೋರಿದರು.

ಬಳಿಕ ಅಂಚೆ ಕಚೇರಿ ಬಳಿಯಿಂದ ದೇವಸ್ಥಾನದ ವಠಾರಕ್ಕೆ ಬಂದು ಸಭಾ ಕಾರ್ಯಕ್ರಮದ ಮುಗಿದ ಬಳಿಕ ಶೋಭಾಯಾತ್ರೆ ಮುಖ್ಯ ರಸ್ತೆಯಾಗಿ ಬಸ್‍ನಿಲ್ದಾಣದಿಂದ ಹೊರಟು ಕಲ್ಲಾರೆ ವರೆಗೆ ಸಾಗಿ ಅಲ್ಲಿಂದ ತಿರುಗಿ ಶ್ರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು.

 

 

Continue Reading
Click to comment

Leave a Reply

Your email address will not be published. Required fields are marked *

Advertisement