ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

MRPL ಹಸಿರು ವಲಯ ಭೂಸ್ವಾಧೀನ: ಪ್ಯಾಕೇಜ್‌ ಘೋಷಿಸಲು ಸಚಿವರ ಸೂಚನೆ

Published

on

ಮಂಗಳೂರು,,ಎಂ.ಆರ್‌.ಪಿ.ಎಲ್‌. 3ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಜೋಕಟ್ಟೆ ಗ್ರಾಮದ 27 ಎಕ್ರೆ ಭೂಸ್ವಾ ಧೀನಗೊಳ್ಳುವ ನಿರ್ವಸಿತರಿಗೆ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.ಎಂ.ಆರ್‌.ಪಿ.ಎಲ್‌. ಹಸುರು ವಲಯ ಭೂಸ್ವಾಧೀನಕ್ಕೆ ಸಂಬಂಧಿಸಿ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

3ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣ ಭೂಸ್ವಾಧೀನಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸಲು ಈಗಾಗಲೇ ಕೆ.ಪಿ.ಟಿ. ಪಾಲಿಟೆಕ್ನಿಕ್‌ ಸಂಸ್ಥೆಗೆ ವಹಿಸಲಾಗಿದ್ದು, ಮೂರು ತಿಂಗಳಲ್ಲಿ ಸಮೀಕ್ಷೆ ಬರಲಿದೆ. ಅದಕ್ಕೂ ಮುನ್ನ ನಿರ್ವಸಿತರಿಗೆ ಒಪ್ಪಿಗೆಯಾಗುವ ಪ್ಯಾಕೇಜ್‌ ಅನ್ನು ನಿರ್ಧರಿಸುವಂತೆ ಸಚಿವರು ಎಂ.ಆರ್‌.ಪಿ.ಎಲ್‌. ಅಧಿಕಾರಿಗಳಿಗೆ ಸಲಹೆ ಮಾಡಿದರು.

ಹಸಿರು ವಲಯ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ನಡೆಸಬೇಕು. ಅಲ್ಲಿರುವ ಮನೆ, ಜಮೀನುಗಳ ಬಗ್ಗೆ ನಿಖರವಾಗಿ ವರದಿ ತಯಾರಿಸಬೇಕು. ಶೀಘ್ರದಲ್ಲೇ ಪುನರ್ವಸತಿ ಪ್ಯಾಕೇಜ್‌ ನಿರ್ಧರಿಸುವಂತೆ ಸೂಚಿಸಿದ ಸಚಿವರು, ಭೂಸ್ವಾಧೀನಗೊಳ್ಳುವ ಸ್ಥಳಕ್ಕೆ ತಾನು ಶೀಘ್ರದಲ್ಲೇ ಭೇಟಿ ನೀಡುವುದಾಗಿ ತಿಳಿಸಿದರು. ಎರಡು ತಿಂಗಳ ಬಳಿಕ ಈ ವಿಷಯದಲ್ಲಿ ಮತ್ತೆ ಸಭೆ ನಡೆಸುವುದಾಗಿ ಹೇಳಿದರು.
ಎಂ.ಆರ್‌.ಪಿ.ಎಲ್‌. ಅಧಿಕಾರಿಗಳು ಮಾತನಾಡಿ, ಹಸಿರು ವಲಯ ಭೂಸ್ವಾ ಧೀನಕ್ಕೆ ಸಮೀಕ್ಷಾ ವರದಿ ಹಾಗೂ ಗ್ರಾಮಸ್ಥರೆಲ್ಲರ ಒಪ್ಪಿಗೆ ಅಗತ್ಯವಿದೆ. ಪರಿಹಾರ ಪ್ಯಾಕೇಜ್‌ ಅನ್ನು ಬೋರ್ಡ್‌ ಸಭೆಯಲ್ಲಿಟ್ಟು ಶೀಘ್ರವಾಗಿ ನಿರ್ಧರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಕೈಗಾರಿಕೆ ಜಂಟಿ ನಿರ್ದೇಶಕ ಗೋಕುಲದಾಸ್‌ ನಾಯಕ್‌, ಕೆಐಎಡಿಬಿ ವಿಶೇಷ ಭೂಸ್ವಾ ಧೀನಾ ಧಿಕಾರಿ ರಾಜು, ಎಂ.ಆರ್‌.ಪಿ.ಎಲ್‌. ಅ ಧಿಕಾರಿಗಳು, ಮುನೀರ್‌ ಕಾಟಿಪಳ್ಳ, ತಾ.ಪಂ.ಮಾಜಿ ಸದಸ್ಯ ಬಶೀರ್‌, ಜೋಕಟ್ಟೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಂತ ಅವರನ್ನು ಸಮೀಪದ ಆಸ್ಪತ್ರೆಗೆ ಕಾರು ಚಾಲಕ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಪತ್ನಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಸದಾನಂದಗೌಡ ಅವರು ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಅವರೊಂದಿಗೆ ದಾಸಹಳ್ಳಿಯ ಶಾಸಕ ಮುನಿರಾಜು ಕೂಡ ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement